ಕರ್ನಾಟಕ ಶಿಲ್ಪಗಳ ನಾಡು, ಪ್ರಕೃತಿ ಸೌಂದರ್ಯದ ಚೆಲುವಿನ ಬೀಡು. ಅದಕ್ಕೆ ಪೂರಕ ಎಂಬಂತೆ ರಾಜ್ಯದಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಜಲಪಾತಗಳು ಯಾರಿಗೆ ತಾನೆ ಇಷ್ಟ ಅಲ್ಲ. ಮಳೆಗಾಲದಲ್ಲಂತೂ ಧುಮ್ಮಿಕ್ಕಿ ಹರಿಯುವ ಜಲಧಾರೆಯನ್ನು ನೋಡುವ ಸೊಬಗೆ ಬೇರೆ. ಅದರಲ್ಲೂ ಜೋಗ ಜಲಪಾತದ ಬೋರ್ಗರೆತ ಎಂತವರನ್ನೂ ಮೋಡಿ ಮಾಡುತ್ತೆ. ಮಳೆಗಾಲದಲ್ಲಿ ರಾಜ್ಯದ ಎಲ್ಲ ಜಲಪಾತಗಳೂ ಮೈ ತುಂಬಿ ಹರಿಯುವ ಸೊಬಗನ್ನು ನೋಡಿಯೇ ಅನುಭವಿಸಬೇಕು. ಆದರೆ ಮಳೆಗಾಲ ಜಲಪಾತ ವೀಕ್ಷಣೆಗೆ ಸೂಕ್ತವಲ್ಲ. ಜೋಗ ಜಲಪಾತವನ್ನು ಹತ್ತಿರದಿಂದ ನೋಡಲು ಸಾಧ್ಯವಿಲ್ಲ.