ಕಣ್ಮನ ಸೆಳೆಯುತ್ತಿರುವ ಕಲ್ಲತ್ತಗಿರಿ, ಹೆಬ್ಬೆ ಫಾಲ್ಸ್

ಚಿಕ್ಕಮಗಳೂರು, ಸೋಮವಾರ, 23 ಜುಲೈ 2018 (13:39 IST)

ಪರ್ವತ ಶ್ರೇಣಿಗಳ ನಾಡಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಪರ್ವತ ಶ್ರೇಣಿಗಳಲ್ಲಿರುವ ಫಾಲ್ಸ್ ಗಳು ಎಂದಿಗಿಂತ ಹೆಚ್ಚಾಗಿ ಮೈದುಂಬಿಕೊಂಡು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.
 
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆ ತರೀಕೆರೆ ತಾಲ್ಲೂಕಿನ ಪರ್ವತ ಶ್ರೇಣಿಗಳಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಕಲ್ಲತ್ತಗಿರಿ ಹಾಗೂ ಹೆಬ್ಬೆ ಫಾಲ್ಸ್ ಗಳಿಗೆ  ಹೆಚ್ಚಾಗಿ ಹರಿದು ಬರುತ್ತಿದೆ. ಮೇಲಿನಿಂದ ಧುಮ್ಮುಕ್ಕುತ್ತಿರುವ ನೀರಿನ ದೃಶ್ಯಾವಳಿ ನೋಡುಗರ ಗಮನ ಸೆಳೆಯುತ್ತಿವೆ. ಹಸಿರು ಬೆಟ್ಟಗಳ ನಡುವೆ ಕಣ್ಣಿಗೆ  ಕಾಣಸಿಗುವ ಹಾಲ್ನೊರೆಯಂತೆ  ಹರಿಯುತ್ತಿರುವ ನೀರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹೆಬ್ಬೆ ಮತ್ತು ಕಲ್ಲತ್ತಗಿರಿ ಫಾಲ್ಸ್ ಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಕಲ್ಲತ್ತಗಿರಿ
ಹಾಗೂ ಹೆಬ್ಬೆಯು ತುಂಬಿ ಹರಿಯುತ್ತಿದ್ದು ಪ್ರವಾಸಿಗರಲ್ಲಿ ಎಂದಿಗಿಂತ ಹೆಚ್ಚಾಗಿ ಮುದನೀಡುತ್ತಿವೆ. ಹಸಿರು ಬೆಟ್ಟಗಳ ನಡುವೆ ತಣ್ಣನೆಯ ಮೋಡ, ರಸ್ತೆ ತುಂಬೆಲ್ಲ ಜುಳು ಜುಳು ಝರಿಗಳ ನಾದ ಪ್ರವಾಸಿಗರಲ್ಲಿ ಹೊಸ ಉತ್ಸಾಹ ಮೂಡಿಸುತ್ತಿದೆ.
 
ಇದರಲ್ಲಿ ಇನ್ನಷ್ಟು ಓದಿ :  

ಪ್ರವಾಸೋದ್ಯಮ

news

ಕಲಿಯುಗದ ಅಂತ್ಯವನ್ನು ಹೇಳುತ್ತೆ ಈ ದೇವಾಲಯ ಎಲ್ಲಿದೆ ಗೊತ್ತಾ...!

ಜಗತ್ತಿನ ಆದಿ-ಅಂತ್ಯ ಇದು ಶತಮಾನಗಳಿಂದ ನಮ್ಮ ಪುರಾಣದಲ್ಲಿ ಕಂಡುಬರುವ ಪದ. ಇಂದು ನಾವೆಲ್ಲರೂ ಕಲಿಯುಗದಲ್ಲಿ ...

news

ಮುಂಗಾರು ಮಳೆಗೆ ಮಲೆನಾಡಿನ ಕಂಪು

ಮಳೆ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ... ಮಳೆಯಲ್ಲಿ ನೆನೆಯುತ್ತ ಆ ಚುಮ ಚುಮ ಚಳಿಗೆ ಸಣ್ಣದಾಗಿ ನಡುಗಿ ...

news

ಈ ರಸ್ತೆಯಲ್ಲಿ ಪ್ರಯಾಣಿಸಲು ಎರಡು ಗುಂಡಿಗೆ ಬೇಕು ಗೊತ್ತಾ...!

ಕೆಲವರಿಗೆ ರಸ್ತೆ ಪ್ರಯಾಣದ ಗೀಳು ಇರುತ್ತದೆ. ರಜೆ ಸಿಕ್ಕರೆ ಸಾಕು ಬೈಕನ್ನು ಏರಿ ಇಲ್ಲವೇ ಕಾರನ್ನು ಏರಿ ...

news

ಹೆಸರಿಲ್ಲದ ಊರಿನಲ್ಲಿ ನೀರ ಮೇಲೆ ವಾಸ....ವಿಚಿತ್ರ ಆದರೂ ಸತ್ಯ...!

ಹಂಚಿನ ಮನೆಗಳು, ಬಂಗಲೆಗಳು, ಗುಡಿಸಲುಗಳಲ್ಲಿ ಇಲ್ಲವೇ ಹಡಗುಗಳ ಮೇಲೆ ಗುಡಿಸಲು ಕಟ್ಟಿ ಅಲ್ಲಿ ...