ಬೆಂಗಳೂರು : ಕೊಡಚಾದ್ರಿ ಬೆಟ್ಟ ಪ್ರವಾಸಿಗರಿಗೆ ಒಂದು ರಮಣೀಯ ತಾಣವಾಗಿದ್ದು, ಇದು ನೋಡುಗರ ಕಣ್ಣಿಗೂ ಮುದವನ್ನು ನೀಡುತ್ತದೆ. ಕೊಡಚಾದ್ರಿ ಬೆಟ್ಟಗಳ ಸಾಲು ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಇದೆ. ಇದು ಸಮುದ್ರ ಮಟ್ಟದಿಂದ ಸುಮಾರು 1343ಮೀ ಎತ್ತರದಲ್ಲಿದೆ. ಕೊಡಚಾದ್ರಿ ಬೆಟ್ಟ ಪ್ರಕೃತಿ ಪ್ರಿಯರಿಗೆ ಮಾತ್ರವಲ್ಲದೆ ಇಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನವಿರುವುದರಿಂದ ಧಾರ್ಮಿಕರನ್ನು ಕೂಡ ಈ ಸ್ಥಳ ಆಕರ್ಷಿಸುತ್ತದೆ. ಕೊಡಚಾದ್ರಿ ಬೆಟ್ಟದ ಮೇಲೆ ಸರ್ವಜ್ಞ ಪೀಠವೆಂಬ ಒಂದು ಸಣ್ಣ ದೇವಾಲಯವಿದೆ.