ಕೊಡಗಿನ ಬ್ರಹ್ಮಗಿರಿಯ ತಲಕಾವೇರಿಯಲ್ಲಿ ಹುಟ್ಟಿ ಕರ್ನಾಟಕ ದಾಟಿ ಪಕ್ಕದ ರಾಜ್ಯದಲ್ಲೂ ಹರಿಯುವ ಕಾವೇರಿ ನದಿ ಸಪ್ತಸಿಂಧು ಪವಿತ್ರ ನದಿಗಳಲ್ಲಿ ಒಂದಾಗಿದೆ. ಪ್ರತೀ ತುಲಾ ಸಂಕ್ರಮಣದಂದು ಇಲ್ಲಿ ತೀರ್ಥ ಉದ್ಭವವಾಗುತ್ತದೆ. ಕಾವೇರಿ ಕುಂಡ ನೋಡಿ ಮೇಲಿರುವ ಅಗಸ್ತ್ಯ ಮುನಿ ದೇವಾಲಯ ದರ್ಶಿಸಿ, ಮೆಟ್ಟಿಲುಗಳನ್ನು ಬಳಸಿ ಬ್ರಹ್ಮಗಿರಿಯ ತುತ್ತತುದಿಗೇರಿದರೆ, ಕೊಡಗಿನ ವಿಹಂಗಮ ನೋಟವೊಂದನ್ನು ಕಣ್ಣಲ್ಲಿ ತುಂಬಿಕೊಳ್ಳಬಹುದು. ಕಾಲು ಬಚ್ಚುತ್ತದೆಂಬ ಕುಂಟು ನೆಪ ಬೇಡ. ತಲಕಾವೇರಿಯಿಂದ ಕೆಳಗಿರುವ ಭಾಗಮಂಡಲದಲ್ಲಿ ಭಗಂಡೇಶ್ವರ ದೇವಾಲಯವಿದೆ. ಕಾವೇರಿ