ಹಂಚಿನ ಮನೆಗಳು, ಬಂಗಲೆಗಳು, ಗುಡಿಸಲುಗಳಲ್ಲಿ ಇಲ್ಲವೇ ಹಡಗುಗಳ ಮೇಲೆ ಗುಡಿಸಲು ಕಟ್ಟಿ ಅಲ್ಲಿ ವಾಸಿಸುವುದನ್ನು ನೀವು ನೋಡಿರುತ್ತೀರಿ. ಆದರೆ ವರ್ಷ ಪೂರ್ತಿ ನೀರಿನ ಮೇಲೆ ಗುಡಿಸಲು ಕಟ್ಟಿ ವಾಸಿಸುವರನ್ನು ನೋಡಿದ್ದೀರಾ..! ಅದನ್ನು ನೀವು ಊಹಿಸಲು ಸಾಧ್ಯವಿಲ್ಲ ಆದ್ರೆ ಇದು ನಿಜ. ಯಾವುದೇ ಸಂಪರ್ಕ ಸಾಧನ, ವಿದ್ಯುತ್ಶಕ್ತಿ ನೆರವಿಲ್ಲದೇ ಇಂದಿನ ಆಧುನಿಕ ಕಾಲದಲ್ಲೂ ಜನರು ಈ ರೀತಿಯಾಗಿ ಬದುಕುತ್ತಿರುವುದನ್ನು ಕೇಳಿದರೆ ನೀವು ಅಚ್ಚರಿ ಪಡದೇ ಇರಲಾರಿರಿ.