ಮಳೆ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ... ಮಳೆಯಲ್ಲಿ ನೆನೆಯುತ್ತ ಆ ಚುಮ ಚುಮ ಚಳಿಗೆ ಸಣ್ಣದಾಗಿ ನಡುಗಿ ಮನೆಯನ್ನು ಸೇರಿ ಬಿಸಿ ಚಹಾ ಸೇವಿಸುವ ಸುಖ ಹೇಳುವಂತದ್ದಲ್ಲ.. ಅದರಲ್ಲೂ ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಗಾಲ ಶುರುವಾಯಿತೆಂದರೆ ಸಾಕು ಪ್ರಕೃತಿ ತನ್ನದೇ ಆದ ರೀತಿಯಲ್ಲಿ ನಮ್ಮನ್ನು ಸೆಳೆಯತೊಡಗುತ್ತದೆ