ಅರಮನೆಗಳ ನಗರಿ ಮೈಸೂರು ಸಾಂಸ್ಕೃತಿಕ ರಾಜಧಾನಿ ಎಂಬ ಖ್ಯಾತಿ ಪಡೆದಿದೆ. ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿರುವ ಮೈಸೂರು ಗತಕಾಲದ ಇತಿಹಾಸ ಸಾರುವ ನಗರಿ. ಕ್ರಿ.ಶ.1399ರಲ್ಲಿ ಯದುರಾಯನಿಂದ ಸ್ಥಾಪನೆಗೊಂಡ ಮೈಸೂರು ಅರಸು ಮನೆತನ ಪ್ರಾರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿತ್ತು. ಕ್ರಿ.ಶ.1578ರಲ್ಲಿ ಒಡೆಯರ ಪಾರುಪತ್ಯದಲ್ಲಿ ಮೈಸೂರು ಸ್ವತಂತ್ರ ಸಂಸ್ಥಾನವಾಯಿತು. ಕ್ರಿ.ಶ.1610ರ ವೇಳೆಗೆ ರಾಜ ಒಡೆಯರು ವಿಶ್ವವಿಖ್ಯಾತ ದಸರಾ ಉತ್ಸವ ಆರಂಭಿಸಿದರು.