ಕರಾವಳಿ ಪ್ರದೇಶ ಮತ್ತು ಮಲೆನಾಡು ಎಂದ ಕೂಡಲೇ ನಮಗೆ ನೆನಪಾಗುವುದು ಕಡಲು ತೀರ, ಸಾಹಿತ್ಯ, ರುಚಿಕರವಾದ ಊಟ, ಮಲೆನಾಡ ತಪ್ಪಲು ಆದರೆ ಅದಕ್ಕೂ ಮೀರಿ ಇಲ್ಲಿ ಒಂದು ವಿಶೇಷತೆ ಇದೆ ಅದುವೇ ಯಕ್ಷಗಾನ. ಹೌದು ತಂಪಾದ ಇಳಿಸಂಜೆಯಲ್ಲಿ ಚಂಡೆ ಮದ್ದಲೆಯ ಶಬ್ದದ ನಡುವೆ ಭಾಗವತರ ತಾಳ ಸುಶ್ರಾವ್ಯ ಹಾಡುಗಾರಿಕೆಯಿಂದ ವೇಷ-ಭೂಷಣಗಳನ್ನು ತೊಟ್ಟ ಪಾತ್ರಧಾರಿಗಳ ಆಂಗಿಕಾಭಿನಯ, ನೃತ್ಯಾಭಿನಯ ಮತ್ತು ಮಾತುಗಾರಿಕೆಯ ಮೂಲಕ ಕಥೆಯನ್ನು ಹೇಳುತ್ತಾ ಶುರುವಾಗುವ ಈ ಯಕ್ಷಗಾನವನ್ನು ನೋಡಲೆಂದೇ ಕರಾವಳಿಯಲ್ಲಿ