ದಕ್ಷಿಣ ಭಾರತದಲ್ಲಿಯೇ ಅತೀ ಹೆಚ್ಚು ಮಳೆ ಸುರಿಯುವ ಆಗುಂಬೆ ಪ್ರವಾಸಿ ತಾಣ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಈ ಸುಂದರ ಪ್ರವಾಸಿ ತಾಣ ಅರಬ್ಬಿ ಸಮುದ್ರದಲ್ಲಿ ಮುಳುಗುವ ಸೂರ್ಯಾಸ್ಥದ ದೃಶ್ಯಕ್ಕಾಗಿ ಪ್ರಸಿದ್ಧವಾಗಿದೆ. ಸುಂದರ ಪ್ರವಾಸಿ ತಾಣವಾಗಿರುವ ಆಗುಂಬೆ, ಆಯುರ್ವೇದ ಗಿಡಮೂಲಿಕೆಗಳಿಂದ ಕುಡಿರುವ ಪ್ರದೇಶವಾಗಿರುವುದರಿಂದ ಪ್ರವಾಸಿಗರು ಸ್ವಾಸ್ಥ್ಯವನ್ನು ಸುಧಾರಿಸಿಕೊಳ್ಳಲು ಇಲ್ಲಿ ಆಗಮಿಸುತ್ತಾರೆ. ಈ ಪ್ರದೇಶ ಭೇಟಿ ನೀಡುವ ಪ್ರವಾಸಿಗರು ಬರ್ಕನ ಜಲಪಾತ, ಕುಂಚಿಕಲ್ ಜಲಪಾತ, ಅಬ್ಬಿ ಫಾಲ್ಸ್, ಜೋಗಿ ಗುಂಡಿ