ಗೇರುಸೊಪ್ಪೆಯ ಧುಮ್ಮಿಕ್ಕುವ ಜಲಪಾತವನ್ನು ಕಂಡು ಅದರ ಸೊಭಗು, ಗಾಂಭೀರ್ಯತೆ, ರಮಣೀಯತೆಯನ್ನು ಹೊಗಳಿದರೆಲ್ಲರು. ಅದೇ ಸರ್ ಎಂ.ವಿ.ವಿಶ್ವೇರಯ್ಯ ನೋಡಿದರು ನೋಡಿ, ಅಯ್ಯೋ ಎಷ್ಟೊಂದು ಶಕ್ತಿ ಪೋಲಾಗುತ್ತಿದೆ ಎಂಬ ಉದ್ಘಾರ ಹೊರಟಿತಂತೆ ಅವರ ಬಾಯಿಯಿಂದ! ಶಿವಮೊಗ್ಗದ ಸಾಗರದಿಂದ 30 ಕಿ.ಮೀ ದೂರದಲ್ಲಿ ಹರಿಯುವ ಶರಾವತಿ ನದಿಯು 829 ಅಡಿಗಳ (253ಮೀಟರು) ಎತ್ತರದಿಂದ ಧುಮುಕುವ ಈ ರುದ್ರ ರಮಣೀಯ ದೃಶ್ಯವನ್ನು ಅದರ ನೈಜ ಗಾಂಭೀರ್ಯದಲ್ಲಿ ಸವಿಯಬೇಕಿದ್ದರೆ ಮಳೆಗಾಲವೇ ಸರಿ.ಶರಾವತಿ ನದಿ ನಾಲ್ಕು ಕವಲುಗಳಾಗಿ ಧುಮಿಕುತ್ತಿದ್ದು,