ಈಗಿನ ಚುನಾವಣೆ ಮುಂದಿನವರೆಗೆ ಒಂದು ಪಾಠವಾಗಬೇಕು. ನನ್ನ ಬೆಂಬಲಕ್ಕೆ ನಿಂತವರನ್ನು ಟಾರ್ಗೆಟ್ ಮಾಡಿ ಕಿರುಕುಳ ಕೊಡ್ತಿದ್ದಾರೆ ಇದು ಸರಿಯಲ್ಲ. ಹೀಗಂತ ಸುಮಲತಾ ಅಂಬರೀಶ್ ಹೇಳಿದ್ದಾರೆ.ಮಂಡ್ಯದ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸುದ್ದಿಗೋಷ್ಠಿ ನಡೆಸಿದ್ದು, ಮತದಾನ ಮುಗಿದ ಬೆನ್ನಲ್ಲೆ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಚಿತ್ರರಂಗ, ರೈತ ಸಂಘ ಹಾಗೂ ಬೆಂಬಲಿಸಿದವರನ್ನು ಸ್ಮರಿಸಿದ್ದಾರೆ. ಮಂಡ್ಯದಲ್ಲಿ ಮತದಾನ ಹೆಚ್ಚಳವಾಗಿರೋದು ನಿಜಕ್ಕೂ ಹೆಮ್ಮೆ, ಇದು ಪ್ರಶಂಸನೀಯ. ಮಹಿಳೆಯರು ಹೆಚ್ಚಿನ ಮತದಾನ ಮಾಡಿದ್ದಾರೆ ಎಂದರು.ಸಿ.ಎಂ.