ಮದ್ವೆಗೆ ಹೆಣ್ಣು ಸಿಗ್ತಿಲ್ಲಾಂತ ಪ್ರತಿಭಟನೆ, ಮತದಾನ ಬಹಿಷ್ಕಾರ

ಬೀದರ್| Jagadeesh| Last Modified ಮಂಗಳವಾರ, 23 ಏಪ್ರಿಲ್ 2019 (16:32 IST)
ವಿಲೇವಾರಿ ಘಟಕ ಸ್ಥಳಾಂತರಗೊಳಿಸುವಂತೆ ಆಗ್ರಹಿಸಿ ಪ್ರತಿಭಟಿಸಿದ ಜನರು ಮಾಡಿದ್ದಾರೆ. ಬೀದರ್ ತಾಲೂಕಿನ ಇಸ್ಲಾಂಪೂರ್ ಗ್ರಾಮಸ್ಥರು ಲೋಕಸಭೆ ಮತದಾನ ಬಹಿಷ್ಕಾರಗೊಳಿಸಿ ಪ್ರತಿಭಟನೆ ಮಾಡಿದರು.

ಬೀದರ್ ನಗರಸಭೆ ಡಂಪ್ ಮಾಡ್ತಿರುವ ಘಟಕದಿಂದಾಗಿ ಗ್ರಾಮದಲ್ಲಿರುವ ಯುವಕರಿಗೆ ಕಂಕಣ ಭಾಗ್ಯ ಇಲ್ಲದಂತಾಗಿದೆ.

ಈ ಕುರಿತು ಹಲವಾರು ಬಾರಿ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರ ಮಾಡುವವರೆಗೆ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಪ್ರತಿಭಟನೆ ಮಾಡಿದರು.

ಮತದಾನ ಬಹಿಷ್ಕರಿಸಿದ ಗ್ರಾಮಕ್ಕೆ ಯಾವೊಬ್ಬ ಅಧಿಕಾರಿ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ರು.

ಇದರಲ್ಲಿ ಇನ್ನಷ್ಟು ಓದಿ :