ನನ್ನೊಂದಿಗೆ ದೈವ ಶಕ್ತಿ ಇದೆ. ಪ್ರಧಾನಿ ನರೇಂದ್ರ ಮೋದಿ ತನ್ನ ಸ್ಥಾನದ ಗೌರವ ಬಿಟ್ಟು ಮಾತಾಡುತ್ತಾರೆ ಅಂತ ಜೆಡಿಎಸ್ ವರಿಷ್ಠ ಹೇಳಿದ್ದಾರೆ.ನಾನೊಬ್ಬನೇ ಸ್ಟ್ರಾಂಗ್ ಅನ್ನೋ ಥರ ಮೋದಿ ಮಾತಾಡ್ತಾರೆ. ಸುಮ್ಮನೆ ಬಂಬಡಾ ಹೊಡೆಯೋದರಲ್ಲಿ ಅರ್ಥ ಇಲ್ಲ ಎಂದು ಪ್ರಧಾನಿ ಮೋದಿ ವಿರುದ್ದ ಹೆಚ್.ಡಿ.ದೇವೇಗೌಡರು ವಿಜಯಪುರದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ನನ್ನ ಅವಧಿಯಲ್ಲಿ ಇದಕ್ಕಿಂತಲೂ ಸುಭದ್ರ ಆಡಳಿತ ನೀಡಿದ್ದೆ. ಇತಿಹಾಸ ತಿರುಚಲು ಆಗಲ್ಲ. ಬಹುಮತ ಇದ್ದಾಗ್ಯೂ ಮೋದಿ ಸರಿಯಾದ ಆಡಳಿತ ನೀಡಲಿಲ್ಲ