[$--lok#2019#state#karnataka--$] ಗಡಿ ಜಿಲ್ಲೆ ಬೀದರ್ ನಲ್ಲಿ 2019ರ ಲೋಕ ಸಮರದಲ್ಲಿ ಬಿಜೆಪಿ- ಕಾಂಗ್ರೆಸ್ ನೇರ ಪೈಪೋಟಿಯಲ್ಲಿದೆ. ಹಾಲಿ ಬಿಜೆಪಿ ಸಂಸದ ಭಗವಂತ ಖೂಬಾ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಡುವೆ ಮೆಗಾಫೈಟ್ ನಡೆದಿದೆ. ಲಿಂಗಾಯತ ಮತಗಳು ಇಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಹೀಗಾಗಿ ಕೊನೆ ಕ್ಷಣದಲ್ಲಿ ಕಮಲ ಪಾಳೆಯದ ಕೋಟೆಯಲ್ಲಿ ಕೈ ಪಡೆ ಅದೇ ಸಮುದಾಯಕ್ಕೆ ಸೇರಿದ ಖಂಡ್ರೆ ಅವರಿಗೆ ಮಣೆ ಹಾಕಿ ಗೆಲುವಿನ ಲೆಕ್ಕಾಚಾರದಲ್ಲಿದೆ.