[$--lok#2019#state#karnataka--$] ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ 2019ರ ಲೋಕ ಸಮರದಲ್ಲಿ ಕಾಂಗ್ರೆಸ್ – ಬಿಜೆಪಿ ನೇರ ಪೈಪೋಟಿಗೆ ಇಳಿದಿವೆ. ಹಾಲಿ ಸಂಸದ ಆರ್.ಧೃವನಾರಾಯಣ್ ಕಾಂಗ್ರೆಸ್ ನಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಇನ್ನು ಬಿಜೆಪಿಯಿಂದ ವಿ.ಶ್ರೀನಿವಾಸ ಪ್ರಸಾದ್ ಸ್ಪರ್ಧೆ ಮಾಡಿದ್ದಾರೆ. ಚಾಮರಾಜನಗರ ಕ್ಷೇತ್ರ ಕಾಂಗ್ರೆಸ್ ಭದ್ರ ಕೋಟೆ ಎನಿಸಿಕೊಂಡಿದೆ. ಐದು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಆರ್.ಧೃವನಾರಾಯಣ್ ನಡುವೆ ಜಿದ್ದಾಜಿದ್ದಿನ ಕಣ ಇಲ್ಲಿದೆ. 2014