ಆಪ್‌ಗೆ ವೋಟ್ ಹಾಕಿದ್ರೆ ಬಿಜೆಪಿಗೆ ಬೆಂಬಲಿಸಿದಂತೆ: ಮುಸ್ಲಿಂ ಮುಖಂಡರು

ಶುಕ್ರವಾರ, 14 ಮಾರ್ಚ್ 2014 (17:05 IST)

PR
ಆಪ್‌ಗೆ ಮತ ಹಾಕಬೇಡಿ, ಆಪ್‌ಗೆ ವೋಟ್ ಹಾಕಿದರೆ ಬಿಜೆಪಿಗೆ ಸಹಾಯವಾಗುತ್ತದೆ ಎಂದು ಕೆಲವು ಮುಸ್ಲಿಂ ಮುಖಂಡರು ಮುಂಬೈನಲ್ಲಿನ ಮುಸ್ಲಿಂ ಸಮುದಾಯವನ್ನು ಒತ್ತಾಯಿಸಿದ್ದಾರೆ.

ಮಾಜಿ ಕಾಂಗ್ರೆಸ್ ಶಾಸಕ ಯೂಸುಫ್ ಅಬ್ರಾನಿ ಕನಸಿನ ಕೂಸಾದ- ಸಚ್ ಕಾ ಸಫರ್ ಎಂಬ ಅಭಿಯಾನದ ಉದ್ಘಾಟನೆಯ ವೇಳೆ ಈ ಮಾತು ಕೇಳಿ ಬಂತು.

" ಕಾಂಗ್ರೆಸ್ ಸಹ ಅನೇಕ ಎಣಿಕೆಗಳಲ್ಲಿ ಮುಸ್ಲಿಮರ ವಿಷಯದಲ್ಲಿ ವಿಫಲವಾಗಿದೆ . ಆದರೆ ಆಪ್ ಕಾಂಗ್ರೆಸ್‌ಗೆ ಪರ್ಯಾಯವಾಗಲು ಸಾಧ್ಯವಿಲ್ಲ. ಆಪ್ ಗೆ ಹೋದ ಪ್ರತಿ ಮತ ಬಿಜೆಪಿಯ ಕೆಲಸವನ್ನು ಸರಳ ಮಾಡುತ್ತದೆ" ಎಂದು ಸಾಮಾಜಿಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಶಬ್ನಮ್ ಹಶ್ಮಿ ಹೇಳಿದರು.

ಕಾಂಗ್ರೆಸ್‌ನ 'ಭ್ರಷ್ಟ ರಾಜಕೀಯದಿಂದ ಮುಸ್ಲಿಮರು ಬೇಸತ್ತಿದ್ದಾರೆ ಮತ್ತು ಬಿಜೆಪಿಯನ್ನು ಅವರು ನಂಬುವುದಿಲ್ಲ. ಹಾಗಾಗಿ ಮುಸ್ಲಿಮರು ತಮಗೆ ಮತ ನೀಡುತ್ತಾರೆ ಎಂದು ಕೆಲವು ದಿನಗಳ ಹಿಂದೆ ಆಪ್ ಪಕ್ಷದ ನಾಯಕರು ಇತ್ತೀಚಿಗೆ ಹೇಳಿಕೆ ನೀಡಿದ್ದರು.

ಸಚ್ ಕಾ ಸಫರ್ ಎಂಬ ಅಭಿಯಾನವನ್ನು ಮಹಾರಾಷ್ಟ್ರ ರಾಜ್ಯಾದ್ಯಂತ ಎರಡು ಡಜನ್ ಕ್ಷೇತ್ರಗಳಲ್ಲಿ ಮತ್ತು ಬಿಹಾರ ಮತ್ತು ಉತ್ತರ ಪ್ರದೇಶದ ಕೆಲವು ಕ್ಷೇತ್ರಗಳಲ್ಲಿ ನಡೆಸುವ ಗುರಿ ಶಬ್ನಮ್ ಹಶ್ಮಿಯದು.

ಆಪ್ ಪರ ಟಿಕೆಟ್ ಪಡೆದಿರುವ ಪ್ರಸಿದ್ಧ ಕಾರ್ಯಕರ್ತೆ ಮೇಧಾ ಪಾಟ್ಕರ್ ನಿರ್ಣಯವನ್ನು ವಿರೋಧಿಸಿರುವ ಅವರು "ಮೇಧಾ ನಮಗೆ ದ್ರೋಹವೆಸಗಿದ್ದಾರೆ. ಅವರು ದಣಿದಿರಬೇಕು ಮತ್ತು ಸಂಸತ್ತಿನಲ್ಲಿ ಇರಲು ಬಯಸುತ್ತಿದ್ದಾರೆ. ಇದು ಅವರು ಮಾಡುತ್ತಿರುವ ತಪ್ಪು" ಎಂದು ಅವರು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...