ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಕಳಂಕಿತರ ಹೆಸರು
ನವದೆಹಲಿ|
ವೆಬ್ದುನಿಯಾ|
Last Updated:
ಮಂಗಳವಾರ, 15 ಏಪ್ರಿಲ್ 2014 (10:52 IST)
PR
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕಳಂಕಿತರ ಹೆಸರು ಕೂಡ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಚಂದೀಗಢ ಸ್ಥಾನಕ್ಕೆ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಅವರನ್ನು ಅಭ್ಯರ್ಥಿಯಾಗಿ ಹೆಸರಿಸಿದೆ. ಲಂಚದ ಹಗರಣಕ್ಕೆ ಸಂಬಂಧಿಸಿದಂತೆ ಬನ್ಸಾಲ್ ಸಚಿವ ಸ್ಥಾನಕ್ಕೆ ಈ ಹಿಂದೆ ರಾಜೀನಾಮೆ ನೀಡಿದ್ದರು. ರೈಲ್ವೆ ಮಂಡಳಿಯ ಸದಸ್ಯನು ಒಳಗೊಂಡ ಲಂಚದ ಹಗರಣದಲ್ಲಿ ಬನ್ಸಾಲ್ ಸೋದರಳಿಯ ಪ್ರಮುಖ ಆರೋಪಿಯಾಗಿದ್ದರಿಂದ ಕಾಂಗ್ರೆಸ್ ಪಟ್ಟಿಯಿಂದ ಬನ್ಸಾಲ್ ಹೆಸರನ್ನು ಕೈಬಿಡಲಾಗುವುದೆಂಬ ಊಹಾಪೋಹ ಹರಡಿತ್ತು. ಬನ್ಸಾಲ್ ಪ್ರಸಕ್ತ ಚಂದೀಗಢದ ಸಂಸದರಾಗಿದ್ದು, ಸಿಬಿಐ ತನಿಖೆ ಬಳಿಕ ದೋಷಮುಕ್ತರಾಗಿದ್ದರು.