ಕಾಂಗ್ರೆಸ್ ಹೈಕಮಾಂಡ್‌ನಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಶುಕ್ರವಾರ, 14 ಮಾರ್ಚ್ 2014 (17:01 IST)

PR
ಕರ್ನಾಟಕದಿಂದ ಅತಿ ಹೆಚ್ಚು ಸ್ಥಾನ ನಿರೀಕ್ಷಿಸಿರುವ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ 26 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಖೈರುಗೊಳಿಸಿದೆ.

ಆಂತರಿಕ ಚುನಾವಣೆ ಮೂಲಕ ಆಯ್ಕೆ ಮಾಡಬೇಕಾದ ಮಂಗಳೂರು ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳ ಪೈಕಿ ಮಂಗಳೂರಿಗೆ ಜನಾರ್ದನ ಪೂಜಾರಿ ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಈ ಹಿಂದೆಯೇ ನಿರ್ಧರಿಸಿದ್ದಂತೆ ಎಲ್ಲ 9 ಹಾಲಿ ಸಂಸದರು ಟಿಕೆಟ್ ಗಿಟ್ಟಿಸಿದ್ದಾರೆ. ಶುಕ್ರವಾರ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸುದೀರ್ಘ ಚರ್ಚೆ ನಂತರ ಪಟ್ಟಿಯನ್ನು ಅಖೈರುಗೊಳಿಸಲಾಗಿದೆ. ಗೆಲ್ಲುವುದೇ ಮುಖ್ಯ ಮಾನದಂಡ ಎಂಬ ತತ್ವವನ್ನಾಧರಿಸಿ ಆಯ್ಕೆ ಅಖೈರುಗೊಳಿಸಲಾಗಿದೆ.

ಇನ್ನು ಅಧಿಕೃತ ಘೋಷಣೆ ಬಾಕಿ: ಎಐಸಿಸಿ ಪಟ್ಟಿಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ಪಟ್ಟಿ ಪ್ರಕಟವಾಬಹುದು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ಉಳಿದಂತೆ ನಂದನ್ ನಿಲೇಕಣಿ, ಲಕ್ಷ್ಮಿ ನಿಂಬಾಳ್ಕರ್, ಎಸ್.ಎಸ್. ಮಲ್ಲಿಕಾರ್ಜುನ ಅವರು ಟಿಕೆಟ್ ಪಡೆದಿದ್ದಾರೆ. ಖಚಿತವಾಗಿ ಸೋಲಬಹುದಾದ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದ ತಕ್ಕಡಿ ತೂಗಲು ಯತ್ನಿಸಿರುವ ಕಾಂಗ್ರೆಸ್ ಹೈಕಮಾಂಡ್, ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಗೆಲ್ಲುವ ಮಾನದಂಡದ ಹೊರತಾಗಿ ಪಕ್ಷ ನಿಷ್ಠೆ, ಹಿರಿತನ ಸೇರಿದಂತೆ ಯಾವ ಅಂಶಕ್ಕೂ ಹೆಚ್ಚಿನ ಆದ್ಯತೆ ನೀಡುವ ಆಸಕ್ತಿ ತೋರಿಲ್ಲ.

ಸಚಿವ ಹುಕ್ಕೇರಿ ಸ್ಪರ್ಧೆ: ಸಚಿವರಾದ, ದಿನೇಶ್ ಗೂಂಡೂರಾವ್, ಕೃಷ್ಣ ಬೈರೇಗೌಡ, ಎಚ್.ಆಂಜನೇಯ ಅವರನ್ನು ಕಣಕ್ಕಿಳಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಯತ್ನ ಸಫಲವಾಗಿಲ್ಲ. ಈ ಮೂವರು ಸ್ಪರ್ಧಿಸಲು ಆಸಕ್ತಿ ತೋರಿಸಿಲ್ಲ. ಆದರೆ, ಮಗನಿಗಾಗಿ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದ ಪ್ರಕಾಶ್ ಹುಕ್ಕೇರಿ ಚಿಕ್ಕೋಡಿಯಲ್ಲಿ ಒಲ್ಲದ ಮನಸ್ಸಿನಿಂದ ಒಪ್ಪಿದ್ದಾರೆನ್ನಲಾಗಿದೆ. ಎಐಸಿಸಿ ಇನ್ನೂ ಪಟ್ಟಿ ಪ್ರಕಟಿಸಿಲ್ಲ. ಲಭ್ಯವಾಗಿರುವ ಮಾಹಿತಿ ಪ್ರಕಾರ ಅಂತಿಮ ಪಟ್ಟಿ ಹೀಗಿದೆ. ಎಐಸಿಸಿ ಪಟ್ಟಿ ಪ್ರಕಟಿಸುವ ಅಂತಿಮ ಹಂತದಲ್ಲಿ ಕೆಲವು ಹೆಸರುಗಳು ಬದಲಾಗುವ ಸಾಧ್ಯತೆ ಇದೆ ಎಂದೂ ಹೈಕಮಾಂಡ್ ಮೂಲಗಳು ತಿಳಿಸಿವೆ.


ಯಾರು ಯಾವ ಕ್ಷೇತ್ರಕ್ಕೆ?

* ಬೆಂಗಳೂರು ಉತ್ತರ: ಆಂತರಿಕ ಚುನಾವಣೆ

* ಉಡುಪಿ- ಚಿಕ್ಕಮಗಳೂರು: ಜಯಪ್ರಕಾಶ್ ಹೆಗ್ಡೆ

* ಶಿವಮೊಗ್ಗ: ಕುಮಾರ್ ಬಂಗಾರಪ್ಪ

* ಮಂಗಳೂರು: ಆಂತರಿಕ ಚುನಾವಣೆ(ಜನಾರ್ದನ ಪೂಜಾರಿ)

* ಉತ್ತರ ಕನ್ನಡ: ನಿವೇದಿತ್ ಆಳ್ವಾ

* ಬೆಳಗಾವಿ: ಲಕ್ಷ್ಮಿ ಹೆಬ್ಬಾಳಕರ್

* ಚಿಕ್ಕೋಡಿ: ಪ್ರಕಾಶ್ ಹುಕ್ಕೇರಿ

* ಬಿಜಾಪುರ: ಪ್ರಕಾಶ್ ರಾಥೋಡ್

* ಬಾಗಲಕೋಟೆ: ಅಜಯಕುಮಾರ್ ಸರನಾಯಕ್

* ಗುಲ್ಬರ್ಗ: ಮಲ್ಲಿಕಾರ್ಜುನ ಖರ್ಗೆ

* ಬೀದರ್: ಧರಂ ಸಿಂಗ್

* ರಾಯಚೂರು: ಶಶಿಕುಮಾರ್

* ಬಳ್ಳಾರಿ: ಎನ್.ವೈ. ಹನುಮಂತಪ್ಪ

* ದಾವಣಗೆರೆ: ಎಸ್.ಎಸ್. ಮಲ್ಲಿಕಾರ್ಜುನ

* ಚಿತ್ರದುರ್ಗ: ತಿಪ್ಪೇಸ್ವಾಮಿ

* ತುಮಕೂರು: ಮುದ್ದಹನುಮೇಗೌಡ

* ಬೆಂಗಳೂರು ದಕ್ಷಿಣ: ನಂದನ್ ನಿಲೇಕಣಿ

* ಬೆಂಗಳೂರು ಸೆಂಟ್ರಲ್: ಜಾಫರ್ ಷರೀಫ್

* ಕೋಲಾರ: ಕೆ.ಎಚ್. ಮುನಿಯಪ್ಪ

* ಚಿಕ್ಕಬಳ್ಳಾಪುರ: ವೀರಪ್ಪ ಮೊಯ್ಲಿ

* ಬೆಂಗಳೂರು ಗ್ರಾಮಾಂತರ: ಡಿ.ಕೆ. ಸುರೇಶ್

* ಮೈಸೂರು: ಅಡಗೂರು ವಿಶ್ವನಾಥ್

* ಚಾಮರಾಜನಗರ: ಧ್ರುವನಾರಾಯಣ

* ಮಂಡ್ಯ: ರಮ್ಯಾ

* ಹಾಸನ: ಎಸ್.ಎಂ. ಆನಂದ್

* ಹಾವೇರಿ: ಸಲೀಂ ಅಹ್ಮದ್

* ಧಾರವಾಡ: ಮಂಜುನಾಥ ಕುನ್ನೂರು

* ಕೊಪ್ಪಳ: ಅಮರೇಗೌಡ ಬಯ್ಯಾಪುರಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...