ಸೋನಿಯಾ, ಮೋದಿ ಹೆಸರು ಭ್ರಷ್ಟರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆ

ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೆಸರನ್ನು ಕೂಡ ಭ್ರಷ್ಟ ನಾಯಕರ ಪಟ್ಟಿಯಲ್ಲಿ ಹೊಸದಾಗಿಸೇರಿಸಿದ್ದು, ಅವರ ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಆಮ್ ಆದ್ಮಿ ಪಕ್ಷ ತಿಳಿಸಿದೆ. ಕಳಂಕಿತ ರಾಜಕಾರಣಿಗಳ ಪಕ್ಷಕ್ಕೆ ಅವರು ಸಾರಥ್ಯ ವಹಿಸಿದ್ದು, ಕಳಂಕಿತರನ್ನು ರಕ್ಷಿಸುತ್ತಿರುವ ಕಾರಣಕ್ಕಾಗಿ ಭ್ರಷ್ಟರ ಪಟ್ಟಿಯಲ್ಲಿ ಸೇರಿಸಿರುವುದಾಗಿ ಆಮ್ ಆದ್ಮಿ ತಿಳಿಸಿದೆ.ಕಾರ್ಯಕರ್ತರು ಮತ್ತು ಸ್ವಯಂಸೇವಕರ ಪ್ರತಿಕ್ರಿಯೆಯ ಬಳಿಕ ಸೋನಿಯಾ ಮತ್ತು ನರೇಂದ್ರ ಮೋದಿ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.ಇಂತಹ ಭ್ರಷ್ಟ ರಾಜಕೀಯ ವ್ಯವಸ್ಥೆ ಅಂತ್ಯಗೊಳಿಸುವುದು ನಮ್ಮ ಬಯಕೆಯಾಗಿದೆ ಎಂದು ಪಕ್ಷದ ಹಿರಿಯ ಮುಖಂಡ ಗೋಪಾಲ್ ರಾಯ್ ತಿಳಿಸಿದರು.


ಇದರಲ್ಲಿ ಇನ್ನಷ್ಟು ಓದಿ :