ಮಾರುಕಟ್ಟೆಯಲ್ಲಿ 15ಕೆ.ಜಿ. ಟೊಮೇಟೊ 2000 ರೂ. ಹರಾಜಾಗಿದ್ದು, ಇದು ಮಾರುಕಟ್ಟೆ ಇತಿಹಾಸದಲ್ಲೇ ಅತಿಹೆಚ್ಚು ಬೆಲೆಗೆ ಹರಾಜಾದ ಮನ್ನಣೆಗೆ ಪಾತ್ರವಾಗಿದೆ. ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಭಾರಿ ಮಳೆ ಬೀಳುತ್ತಿರುವುದರಿಂದ ಅಲ್ಲಿನ ಟೊಮೇಟೊ ತೋಟಗಳು ಸಂಪೂರ್ಣವಾಗಿ ನೆಲಕಚ್ಚಿದೆ ಈ ಹಿನ್ನೆಲೆಯಲ್ಲಿ ಅಲ್ಲಿನ ವ್ಯಾಪಾರಿಗಳು ಟೊಮೇಟೊ ಖರೀದಿಗಾಗಿ ಇಲ್ಲಿನ ಮಾರುಕಟ್ಟೆಗೆ ಆಗಮಿಸುತ್ತಿದ್ದು ಟೊಮೇಟೊಗೆ ಹೆಚ್ಚಿನ ಬೇಡಿಕೆ ಬಂದಿದೆ. ತಾಲೂಕಿನಲ್ಲಿ ತಿಂಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಟೊಮೇಟೊ ಬೆಲೆ