ಶಿವಮೊಗ್ಗ: ಅಡಿಕೆ ದರ 60 ಸಾವಿರ ರೂಪಾಯಿ ದಾಟಿದೆ. ಕಳೆದ 10 ದಿನದ ಅವಧಿಯಲ್ಲಿ 10 ಸಾವಿರ ರೂಪಾಯಿಯಷ್ಟು ಜಾಸ್ತಿಯಾಗಿದೆ. ಸೋಮವಾರ ಮಾರುಕಟ್ಟೆಯಲ್ಲಿ ರಾಶಿ ಇಡಿ ಅಡಿಕೆ 60,000 ರೂಪಾಯಿ ದಾಟಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಇಡಿ ದರ ಕನಿಷ್ಠ 55,099 ರೂ.ನಿಂದ ಗರಿಷ್ಠ 60,509 ರೂ.ವರೆಗೆ ಮಾರಾಟವಾಗಿದೆ. ಬೆಟ್ಟೆ ದರ 39,305 ರೂ.ವರೆಗೂ ಮಾರಾಟವಾಗಿದೆ. ಕಳೆದ ವರ್ಷ ಅಡಿಕೆ ದರ 42 ಸಾವಿರ ರೂ.ವರೆಗೂ ಇತ್ತು. ವಿದೇಶಿ ಅಡಿಕೆ