ಸೋನಿಯಾ ವಿರುದ್ಧ ಕಣಕ್ಕಿಳಿಯಲಿದ್ದಾರೆ ಶಾಝಿಯಾ ಇಲ್ಮಿ

ಶುಕ್ರವಾರ, 14 ಮಾರ್ಚ್ 2014 (17:12 IST)

PR
ಇಂದು ಆಮ್ ಆದ್ಮಿ ಪಕ್ಷ 61 ಅಭ್ಯರ್ಥಿಗಳ ಹೆಸರುಳ್ಳ ತನ್ನ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಇನ್ಫೋಸಿಸ್‌ನ ಪೂರ್ವ ಸಿಎಫ್ಓವಿ ಬಾಲಕೃಷ್ಣನ್ ಬೆಂಗಳೂರು ಮಧ್ಯ ಕ್ಷೇತ್ರದಿಂದ ಮತ್ತು ಪತ್ರಕರ್ತ ಆಶಿಶ್ ಖೇತಾನ್ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಸೋನಿಯಾ ಗಾಂಧಿ ಕಣಕ್ಕಿಳಿಯುವ ರಾಯ್ ಬರೇಲಿ ಕ್ಷೇತ್ರದಿಂದ ಆಪ್ ನಾಯಕಿ ಮತ್ತು ಪಕ್ಷದ ವಕ್ತಾರೆ ಶಾಝಿಯಾ ಇಲ್ಮಿ ಸ್ಪರ್ಧಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ" ನನ್ನ ಮುಂದೆ ಅನೇಕ ಆಯ್ಕೆಗಳಿವೆ " ಎಂದು ಇಲ್ಮಿ ಹೇಳಿದ್ದಾರೆ.

ಆದರೆ ಪಕ್ಷದವರು ಈ ಸುದ್ದಿಯನ್ನು ಖಚಿತಪಡಿಸಿಲ್ಲ. ನಾವು ತಮ್ಮ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿಲ್ಲ ಎಂದು ಪಕ್ಷದ ವಕ್ತಾರ ದಿಲೀಪ್ ಪಾಂಡೆ ಹೇಳಿದ್ದಾರೆ

ಪಕ್ಷದ ಪ್ರಮುಖ ನಾಯಕಿ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಶಾಝಿಯಾ ಇಲ್ಮಿ ಕಳೆದ ವರ್ಷ ಆರ್‌ಕೆ. ಪುರಂ ಪ್ರದೇಶದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಿ ಅತಿ ಕಡಿಮೆ ಅಂತರದಿಂದ ಸೋತಿದ್ದರು.

ಸೂತ್ರಗಳ ಪ್ರಕಾರ ಸೋನಿಯಾ ಗಾಂಧಿಯ ವಿರುದ್ಧದ ಕದನಕ್ಕೆ ತುಂಬ ಜನಪ್ರಿಯ ಮುಖವನ್ನು ಹುಡುಕಲಾಗುತ್ತಿದೆ. "ದಿಲ್ಲಿಯಲ್ಲಿ ಗೆಲವನ್ನು ಸಾಧಿಸುವುದು ನಮಗೇನೂ ಕಷ್ಟಕರವಲ್ಲ. ಏಕೆಂದರೆ ಇಲ್ಲಿ ನಮಗೆ ಸಮರ್ಥಕರಿದ್ದಾರೆ. ಆದರೆ ಸೋನಿಯಾಗಾಂಧಿಯಂತಹ ಬಲಿಷ್ಠ ವ್ಯಕ್ತಿಯ ವಿರುದ್ಧ ನಮಗೆ ಘಟಾನುಘಟಿ ಮುಖವೇ ಬೇಕು "ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...