IFM ಕಾಲೇಜಿನಲ್ಲಿ ಓದು, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯು ಮಿಂಚುತ್ತಿದ್ದ ರಾಜ್ ಮಲೋತ್ರ (ಶಾಹಿದ್ ಕಪೂರ್) ಬಹುಮುಖ ಪ್ರತಿಭಾವಂತ. ವರ್ಷದ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದು ನಾಲ್ಕು ವರ್ಷಗಳೇ ಕಳೆದಿದ್ದರು, ತನ್ನಂತಹ ಪ್ರತಿಭಾವಂತನಿಗೆ ವೃತ್ತಿ ಜೀವನದಲ್ಲಿ ಮಿಂಚುವ ಒಂದು ಅವಕಾಶವು ಸಿಗದಿರುವ ಬಗ್ಗೆ ರಾಜ್ ಚಿಂತಿತನಾಗುತ್ತಾನೆ. ಇವೆಲ್ಲವು ಅವನನ್ನು ಹಿಂಬಾಲಿಸುತ್ತಿರುವ ದುರ್ವಿಧಿಯ ಫಲವೇ? ಏಕೆಂದರೆ ಏನಾದರು ಒಳಿತಾಗುತ್ತದೆ ಎನ್ನುವಷ್ಟರಲ್ಲಿ ಅದು ಸೋಲಾಗಿ ಪರಿವರ್ತಿತಗೊಳ್ಳುತ್ತಿತ್ತುಇಲ್ಲವಾದರೆ, ಅವನೊಂದು ಮುಖ್ಯವಾದ ನಿರ್ಣಾಯಕ ಮಿಟಿಂಗಿಗೆ ತೆರಳುವ