IFM ರೇ ಆಚಾರ್ಯ ಒಬ್ಬ ಫೋಟೋಗ್ರಾಫರ್. ಏನು ಮಾಡಿದರೂ ಸರಿಯಾಗದ ಯಾವತ್ತೂ ಹೆಣಗಾಡುತ್ತಿರುವ ವ್ಯಕ್ತಿ. ಆದರೆ ತನ್ನ ಅಜ್ಜನಿಂದ ಬಳುವಳಿಯಾಗಿ ವಿಶೇಷ ಕ್ಯಾಮರಾವೊಂದು ಸಿಗುವವರೆಗೆ ಮಾತ್ರ ಈ ಎಲ್ಲಾ ಕಷ್ಟಗಳು. ಆ ವಿಶೇಷ ಕ್ಯಾಮರಾ ರೇಯ ಬದುಕಿನ ದಿಕ್ಕನ್ನೇ ಬದಲಿಸುತ್ತದೆ. ರಾತ್ರೋ ರಾತ್ರಿ ಆತ ಕಂಡ ಕನಸುಗಳೆಲ್ಲ ನನಸಾಗುತ್ತದೆ.ಏರಿಳಿತದ ಬದುಕಿನಲ್ಲಿ ಸಾಗುತ್ತಿದ್ದವನಿಗೆ ವಿಚಿತ್ರ ಅನುಭವ. ಕಷ್ಟಗಳೆಲ್ಲ ಮಾಯವಾಗಿ ಅದೃಷ್ಟ ಖುಲಾಯಿಸಿದ್ದು ವೃತ್ತಿ ಬದುಕಿನಲ್ಲಿ ಮಾತ್ರವಲ್ಲ. ಎಲ್ಲಾ ವಿಭಾಗಗಳಲ್ಲೂ ಆತನದ್ದೇ ಕಾರುಬಾರು.