ರವಿಪ್ರಕಾಶ್ ರೈಆತ ಚಪ್ಪಲಿ ಹೊಲಿಯುವ ಹುಡುಗ. ಆತ ಪಕ್ಕಾ ಪ್ರಾಕ್ಟಿಕಲ್. ಪ್ರೀತಿ ಮಾಡಬಾರದು. ಅದು ಕೂಡಾ ತನ್ನಂತ ಚಪ್ಪಲಿ ಹೊಲಿಯುವವ ಪ್ರೀತಿ ಮಾಡುವುದೆಂದರೆ ಅದು ಶುದ್ದ ತಪ್ಪು ಎಂಬ ಭಾವನೆ ಅವನದು. ಆದರೆ ಅದೇ ದಾರಿಯಲ್ಲಿ ದಿನಾ ಬರುವ ಶ್ರೀಮಂತ ಹುಡುಗಿಗೆ ಈತನ ಮೇಲೆ ಯಾಕೋ ಪ್ರೀತಿ ಹುಟ್ಟುತ್ತದೆ. ಮಳೆಯಲ್ಲಿ ನೆನೆಯುತ್ತಿರುವ ಆಕೆಗೆ ಈ ಚಪ್ಪಲಿ ಹೊಲಿಯುವ ಹುಡುಗ ತನ್ನ ಪ್ಲಾಸ್ಟಿಕ್ ಕಂಬಳಿಯನ್ನು ಕೊಡುತ್ತಾನೆ. ಆಕೆ ಈತನನ್ನು ಮನಸಿಗೆ ಹಚ್ಚಿಕೊಳ್ಳುತ್ತಾಳೆ.