ಸತೀಶ್ ಪಾಗದ್ WD ಯದಾ ಯದಾ ಹಿ ಧರ್ಮಸ್ಯಃ....ಭಗವದ್ ಗೀತೆಯ ಈ ಶ್ಲೋಕವನ್ನೇ ಆಧಾರವಾಗಿಟ್ಟುಕೊಂಡು ದಶಾವತಾರಮ್ ಕಥೆಯನ್ನು ಕಮಲ್ ಹಾಸನ್ ಹೆಣೆದಿದ್ದಾರೆಂಬುದಾಗಿ ಚಿತ್ರದ ಕ್ಲೈಮಾಕ್ಸ್ ನೋಡಿದ ನಂತರ ಅನ್ನಿಸದೇ ಇರದು. ತಮಿಳು ನಾಡಿನಲ್ಲಿ 12ನೇ ಶತಮಾನದ ಆದಿಯಲ್ಲಿ ನಡೆದ ಶೈವ-ವೈಷ್ಣವ ಮತ ಪಂಥಗಳ ನಡುವಿನ ಸಮಾಜದ ಆಂತರಿಕ ಕಲಹ, ಜೊತೆಗೆ ಶೈವ ಮತ ಪ್ರಚಾರದ ಭರದಲ್ಲಿ ಕಾಲ್ಪನಿಕವಾಗಿ ಅಥವಾ ನಿಜವಾಗಿಯೊ ಚೋಳ ರಾಜ ಮಾಡಿದ್ದ ಒಂದೇ ಒಂದು ಕೃತ್ಯದಿಂದ ಪ್ರಾರಂಭವಾಗುವ