ಆಗ್ರಾ: ದೆಹಲಿಯ ನಿರ್ಭಯಾ ಗ್ಯಾಂಗ್ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೆ ಅಂತಹ ಘಟನೆ ವರದಿಯಾಗುವುದು ಸ್ವಲ್ಪದರಲ್ಲಿಯೇ ತಪ್ಪಿದೆ. ಸಿಟಿ ಬಸ್ ಚಾಲಕ ಮತ್ತು ಕಂಡಕ್ಟರ್ ಹಾಗೂ ಪ್ರಯಾಣಿಕ ಸೇರಿ ಪತಿಯ ಎದುರಿನಲ್ಲೇ ಪತ್ನಿಯ ಮೇಲೆ ಅತ್ಯಾಚಾರವೆಸಗುವ ಪ್ರಯತ್ನದ ಘಟನೆ ಆಗ್ರಾದ ಫತೇಹಪುರ್ನ ಸಿಕ್ರಿ ನಗರದಲ್ಲಿ ನಡೆದಿದೆ.