Widgets Magazine

ಅನ್ಯ ಜಾತೀಯ ವಿವಾಹ: ತಂದೆ,ತಾಯಿಗಳಿಂದ ಯುವತಿಯ ಹತ್ಯೆ

ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
PR
ಹೈದರಾಬಾದ್: ಅಂತರ್ಜಾತಿಯ ಪುರುಷನನ್ನು ಮದುವೆಯಾದ 2 ದಿನದಲ್ಲೇ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರನ್ನು ಅವರ ತಂದೆ, ತಾಯಿಗಳೇ ಹತ್ಯೆ ಮಾಡಿದ ದಾರುಣ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತಂದೆ, ತಾಯಿಗಳನ್ನು ಬಂಧಿಸಿದ್ದಾರೆ. ಗುಂಟೂರಿನಲ್ಲಿನ ತಂದೆ, ತಾಯಿಯ ಮನೆಯಲ್ಲಿ 26 ವರ್ಷ ವಯಸ್ಸಿನ ಮಹಿಳೆಯ ಕುತ್ತಿಗೆಯನ್ನು ಹಿಚುಕಿ ಹತ್ಯೆ ಮಾಡಲಾಗಿತ್ತು. ಐಟಿ ಸಂಸ್ಥೆಯ ಸಹೋದ್ಯೋಗಿಯ ಪ್ರೇಮಪಾಶಕ್ಕೆ ಬಿದ್ದ ದೀಪ್ತಿ ಅವನನ್ನು ಮದುವೆ ಮಾಡಿಕೊಂಡಳು. ದೀಪ್ತಿಯ ಪೋಷಕರು ಅವಳ ಸ್ವಗ್ರಾಮ ಗುಂಟೂರಿಗೆ ಕರೆದುಕೊಂಡು ಹೋದರು.

ತಾವು ಮದುವೆಗೆ ಒಪ್ಪಿಗೆ ಸೂಚಿಸಿರುವುದಾಗಿಯೂ ಗುಂಟೂರಿನಲ್ಲಿ ಕೆಲವು ವಿಧಿವಿಧಾನಗಳನ್ನು ಮಾಡಬೇಕೆಂದೂ ತಿಳಿಸಿದರು. ಗುಂಟೂರಿನಲ್ಲಿ ದೀಪ್ತಿಯನ್ನು ಅವಳ ತಂದೆ, ತಾಯಿಗಳು ಕರೆದುಕೊಂಡು ಹೋದರು ಮತ್ತು ಅವಳ ನೂತನ ಪತಿ ಮತ್ತು ಸ್ನೇಹಿತರನ್ನು ಸಣ್ಣ ಅತಿಥಿ ಗೃಹದಲ್ಲಿ ತಂಗುವಂತೆ ಆದೇಶಿಸಲಾಯಿತು.ಪತಿ ಕಿರಣ್ ಕುಮಾರ್ ತನ್ನ ಸೆಲ್‌ಫೋನ್‌ನಲ್ಲಿ ಪತ್ನಿಯನ್ನು ಕರೆಯಲು ಪ್ರಯತ್ನಿಸಿದ. ಆದರೆ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ, ಪೊಲೀಸರಿಗೆ ಸುಳಿವು ನೀಡಿದ. ಪೊಲೀಸರು ಮನೆಯ ಬಾಗಿಲನ್ನು ಒಡೆದು ಒಳಪ್ರವೇಶಿಸಿದಾಗ, ದೀಪ್ತಿ ಹಾಸಿಗೆಯ ಮೇಲೆ ಸತ್ತುಬಿದ್ದಿರುವುದು ಪತ್ತೆಯಾಗಿತ್ತು.


ಇದರಲ್ಲಿ ಇನ್ನಷ್ಟು ಓದಿ :