Widgets Magazine

ಅರವಿಂದ್ ಕೇಜ್ರಿವಾಲ್ ಪಕ್ಷಕ್ಕೆ ಬೇಷರತ್ ಬೆಂಬಲವಿಲ್ಲ: ಉಲ್ಟಾ ಹೊಡೆದ ಕಾಂಗ್ರೆಸ್

ನವದೆಹಲಿ| ರಾಜೇಶ್ ಪಾಟೀಲ್|
PTI
15 ವರ್ಷಗಳ ಅವಧಿಗೆ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದ ಶೀಲಾ ದೀಕ್ಷಿತ್, ಆಮ್ ಆದ್ಮಿ ಪಕ್ಷಕ್ಕೆ ಬೇಷರತ್ತ್ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.

ಸರಕಾರ ರಚಿಸುವ ಆಮ್ ಆದ್ಮಿ ಪಾರ್ಟಿ ನಿರ್ಧಾರವನ್ನು ಸ್ವಾಗತಿಸಿದ ಅವರು, ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲಿ ಎಂದು ಹಾರೈಸಿದ್ದಾರೆ.

ಆಮ್ ಆದ್ಮಿ ಪಕ್ಷಕ್ಕೆ ಕಾಂಗ್ರೆಸ್ ಪಕ್ಷ ಹೊರಗಡೆಯಿಂದ ಬೆಂಬಲ ನೀಡುತ್ತದೆ. ಆದರೆ ಬೇಷರತ್ತು ಬೆಂಬಲವಲ್ಲ ಎಂದು ದೀಕ್ಷಿತ್ ಹೊಸ ರಾಗ ಎಳೆದಿದ್ದಾರೆ.

ಇದಕ್ಕಿಂತ ಮೊದಲು ಜನತೆಯ ಅಭಿಪ್ರಾಯಗಳಿಗೆ ಮನ್ನಣೆ ನೀಡಿದ ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ, ಸರಕಾರ ರಚಿಸುವ ಅಂತಿಮ ನಿರ್ಧಾರ ಕೈಗೊಂಡಿದೆ.

ಕೇಜ್ರಿವಾಲ್ ನೇತೃತ್ವದ ಪಕ್ಷ ವಿದ್ಯುತ್ ದರದಲ್ಲಿ ಶೇ.50 ರಷ್ಟು ಕಡಿತ ಮತ್ತು ಪ್ರತಿ ಮನೆಗೆ 700 ಲೀಟರ್ ನೀರು ಸರಬರಾಜಿನಿಂತಹ ಜನತೆಯ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಅನುಮಾನವಿದೆ ಎಂದು ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :