ಆಂಧ್ರ ಅಸೆಂಬ್ಲಿಯಲ್ಲಿ ತೆಲಂಗಾಣ ರಚನೆ ಮಸೂದೆ ತಿರಸ್ಕೃತ

ವೆಬ್‌ದುನಿಯಾ| Last Modified ಗುರುವಾರ, 30 ಜನವರಿ 2014 (13:03 IST)
PR
PR
ಹೈದರಾಬಾದ್: ವಿಧಾನಸಭೆ ಗುರುವಾರ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಮಂಡಿಸಿದ ನಿರ್ಣಯವನ್ನು ಧ್ವನಿಮತದಿಂದ ಅಂಗೀಕರಿಸಿದ್ದರಿಂದ ರಚನೆ ಮಸೂದೆ ತಿರಸ್ಕೃತಗೊಂಡಿದೆ. ಹೊಸ ರಾಜ್ಯವನ್ನು ಸೃಷ್ಟಿಸುವ ಮಸೂದೆಯನ್ನು ತಿರಸ್ಕರಿಸಬೇಕೆಂಬ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರ ನಿರ್ಣಯವನ್ನು ಬಹುತೇಕ ಶಾಸಕರು ಬೆಂಬಲಿಸಿದರು. ಸದನದಲ್ಲಿ ತೀವ್ರ ಗದ್ದಲಉಂಟಾದ ಬಳಿಕ ಸ್ಪೀಕರ್ ಎನ್. ಮನೋಹರ್ ಅನಿರ್ದಿಷ್ಟಾವಧಿಗೆ ಸದನವನ್ನು ಮುಂದೂಡಿದರು.ತೆಲಂಗಾಣ ಮಸೂದೆ ಕುರಿತು ರಾಷ್ಟ್ರಪತಿಗೆ ಅಭಿಪ್ರಾಯ ತಿಳಿಸುವುದಕ್ಕೆ ಗಡುವು ಗುರುವಾರವೇ ಕೊನೆಗೊಳ್ಳಲಿದ್ದು, ಆಂಧ್ರ ಅಸೆಂಬ್ಲಿ ಸ್ಥಗಿತಗೊಂಡಿದೆ.


ಇದರಲ್ಲಿ ಇನ್ನಷ್ಟು ಓದಿ :