ಯುಪಿಎ ಸರಕಾರ ಲೋಕಸಭೆಯಲ್ಲಿ ಮಂಡಿಸುತ್ತಿರುವ ದುರ್ಬಲ ಲೋಕಪಾಲ್ ಮಸೂದೆಯಿಂದ ಇಲಿಯನ್ನು ಕೂಡಾ ಜೈಲಿಗೆ ಹಾಕಲು ಸಾಧ್ಯವಿಲ್ಲ ಎನ್ನುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ಗೆ ತಿರುಗೇಟು ನೀಡಿದ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಪ್ರಸ್ತುತ ಮಸೂದೆಯಿಂದ ಸಿಂಹವನ್ನು ಕೂಡಾ ಜೈಲಿಗೆ ತಳ್ಳಬಹುದಾಗಿದೆ ಎಂದು ಹೇಳಿದ್ದಾರೆ.