ಐದು ವರ್ಷದ ಮಗುವಿನ ಅತ್ಯಾಚಾರಿಗೆ ಮರಣದಂಡನೆ

ಮುಂಬಯಿ, ಬುಧವಾರ, 26 ಮಾರ್ಚ್ 2014 (08:49 IST)

ಐದು ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ 54 ವರ್ಷದ ವ್ಯಕ್ತಿ ಗೆ ಬಾಂಬೆ ಹೈಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ. 'ನ್ಯಾಯಾಲಯದಲ್ಲಿ ವಿಚಾರಣೆಗೊಳಪಟ್ಟ ಪ್ರಕರಣಗಳಲ್ಲಿ ಇದು ಅಪರೂಪದ್ದಾಗಿದ್ದು ಆತನ ಕೃತ್ಯ ಗಂಭೀರ ಮತ್ತು ಘೋರವಾದದ್ದು' ಎಂದು ಕೋರ್ಟ ಹೇಳಿದೆ.

PTI

ಅಪರಾಧಿ ರೊಕಡೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಎಸಗಿದ್ದು ಸಾಬೀತಾಗಿದ್ದರಿಂದ ಜಸ್ಟೀಸ್ ವಿ.ಕೆ.ಟಾಹಿಲರಮಾನಿ ಮತ್ತು ವಿ ಎಲ್ ಅಚಲಿಯಾರನ್ನೊಳಗೊಂಡ ನ್ಯಾಯಪೀಠ ಆತನಿಗೆ ಜಾರಿ ಮಾಡಿದ್ದ ಮರಣದಂಡನೆಯನ್ನುಎತ್ತಿ ಹಿಡಿದಿದೆ. ಹುಡುಗಿ ಆತನ ನೆರೆ ಮನೆಯವಳಾಗಿದ್ದು, ಘಟನೆ ಥಾಣೆ ಜಿಲ್ಲೆಯಲ್ಲಿ ಕಳೆದ ವರ್ಷ ಜನವರಿ 22 ರಂದು ನಡೆದಿತ್ತು.

"ಅಪರಾಧಿ ಗಂಭೀರ ಅಪರಾಧ ಮಾಡಿದ್ದಾನೆ. ಅಲ್ಲದೇ ಆತನಿಗೆ ತಾನು ಎಸಗಿದ ದುಷ್ಕೃತ್ಯಕ್ಕೆ ಪ್ರತಿಯಾಗಿ ಯಾವ ಪಶ್ಚಾತಾಪವೂ ಇಲ್ಲ. ಆತ ವಿಕೃತ ಮನಸ್ಸಿನವನಾಗಿದ್ದಾನೆ. ಆತನ ಹಿಡಿತದಿಂದ ತಪ್ಪಿಸಿಕೊಳ್ಳಲು ಅರಿಯದ ಪುಟ್ಟ ಬಾಲಕಿಯನ್ನು ಆತ ಬಳಸಿಕೊಂಡಿದ್ದಾನೆ. ಆತ ಬದಲಾಗುತ್ತಾನೆ ಎಂದು ನಾವು ಯೋಚಿಸಲು ಸಾಧ್ಯವೇ ಇಲ್ಲ. ಹಾಗಾಗಿ ಆತನನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ" ಎಂದು ನ್ಯಾಯಪೀಠ ತಿಳಿಸಿದೆ.

ಠಾಣೆಯ ಕೋಪರಿ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ ತನ್ನ ಮನೆಯ ಹೊರಗೆ ಆಡುತ್ತಿದ್ದ ಮಗುವನ್ನು ಪುಸಲಾಯಿಸಿ ಕರೆದುಕೊಂಡು ಹೋದ ಅಪರಾಧಿ ಬಾಲಕಿಯ ಬಾಯಿಯನ್ನು ಕಟ್ಟಿ, ಆಕೆಯ ಮೇಲೆ ಅನೇಕ ಬಾರಿ ಬಲಾತ್ಕಾರ ಎಸಗಿ ಕೊನೆಗೆ ಆಕೆಯ ಕುತ್ತಿಗೆ ಹಿಚುಕಿ ಕೊಂದಿದ್ದ. ಆನಂತರ ಆಕೆಯ ಶವವನ್ನು ಪ್ಲಾಸ್ಟಿಕ್ ಕವರ್ ಒಂದರಲ್ಲಿ ಹಾಕಿ ಹೊರಗೆ ಎಸೆದಿದ್ದ. ಮಾರನೆ ದಿನ ಆಕೆಯ ಶವ ಪತ್ತೆಯಾಗಿತ್ತು.

ಮಗು ಕಾಣೆಯಾದ ನಂತರ ಅನುಮಾನಾಸ್ಪದ ವರ್ತನೆ ತೋರುತ್ತಿದ್ದ ರೊಕಡೆಯನ್ನು ಬಂಧಿಸಲಾಯಿತು. ಆತನ ಮಗ, ಮಗಳು, ಪತ್ನಿ ಸೇರಿದಂತೆ ಗ್ರಾಮದ 27 ಜನ ಆತನ ವಿರುದ್ಧ ಕೋರ್ಟನಲ್ಲಿ ಸಾಕ್ಷಿ ನುಡಿದಿದ್ದರು ಎಂದು ಪೋಲಿಸ್ ಮೂಲಗಳು ತಿಳಿಸಿವೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ...

ಮೋದಿ ಪ್ರಧಾನಿಯಾಗೋಲ್ಲ, ಯುಪಿಎ ಅಧಿಕಾರಕ್ಕೆ ಬರ್ತದೆ: ಇಬ್ರಾಹಿಂ ಭವಿಷ್ಯ

ಮಂಗಳೂರು: ನರೇಂದ್ರ ಮೋದಿ ಪ್ರಧಾನಮಂತ್ರಿ ಆಗೋದಿಲ್ಲ. ಯುಪಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಈ ಬಾರಿ ...

ಹಾಸನದಲ್ಲಿ ಮತ್ತೆ ದೇವೇಗೌಡರ ಕೊರಳಿಗೆ ವಿಜಯಮಾಲೆ ಬೀಳುತ್ತಾ?

ಮಾಜಿ ಪ್ರಧಾನಿಯ ಕ್ಷೇತ್ರ ಹಾಸನ ಕೂಡ ಸಮಸ್ಯೆಗಳಿಂದ ಹೊರತಾಗಿಲ್ಲ. ಮಾಜಿ ಪ್ರಧಾನಿಯ ತವರು ಎನ್ನುವ ಖ್ಯಾತಿ ...