ಕರ್ನಾಟಕದ ನಾಲ್ವರು ಭ್ರಷ್ಟ ಮುಖಂಡರನ್ನು ಸೋಲಿಸಲು ಕೇಜ್ರಿವಾಲ್ ಕರೆ

ಬೆಂಗಳೂರು| ವೆಬ್‌ದುನಿಯಾ|
PR
PR
ಆಮ್ ಆದ್ಮಿ ಪಕ್ಷ ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಸಜ್ಜುಗೊಂಡಿದ್ದು, ಕರ್ನಾಟಕದ ನಾಲ್ವರು ಭ್ರಷ್ಟ ನಾಯಕರನ್ನು ಚುನಾವಣೆಯಲ್ಲಿ ಸೋಲಿಸುವುದಕ್ಕೆ ರಣತಂತ್ರ ರೂಪಿಸುತ್ತಿದೆ. ಅನಂತಕುಮಾರ್, ವೀರಪ್ಪ ಮೊಯ್ಲಿ, ಎಚ್.ಡಿ.ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರನ್ನು ಕೇಜ್ರಿವಾಲ್ ಭ್ರಷ್ಟ ನಾಯಕರ ಪಟ್ಟಿಯಲ್ಲಿ ಹೆಸರಿಸಿದ ಕರ್ನಾಟಕದ ನಾಲ್ವರು ಮುಖಂಡರು. ಕನ್ನಿ ಮೋಳಿ, ಸಲ್ಮಾನ್ ಖುರ್ಷಿದ್, ಮಾಯಾವತಿ ,ಮುಲಾಯಂ, ಜಗನ್ ಮೋಹನ್ ರೆಡ್ಡಿ, ಕಪಿಲ್ ಸಿಬಾಲ್, ಕಮಲ್ ನಾಥ್, ಫಾರುಕ್ ಅಬ್ದುಲ್ಲಾ, ಶರದ್ ಪವಾರ್, ತರುಣ್ ಗಗೋಯಿ ನಿತಿನ್ ಗಡ್ಕರಿ ಹೆಸರನ್ನು ಕೂಡ ಕೇಜ್ರಿವಾಲ್ ಪ್ರಸ್ತಾಪಿಸಿದ್ದಾರೆ. ಭ್ರಷ್ಟರು ಯಾವುದೇ ಕಾರಣಕ್ಕೂ ಗೆಲ್ಲಬಾರದು ಎಂದು ಕೇಜ್ರಿವಾಲ್ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :