Widgets Magazine

ಕಾಂಗ್ರೆಸ್ ಅಭ್ಯರ್ಥಿ ನಟಿ ನಗ್ಮಾಳನ್ನು ಚುಂಬಿಸಲು ಯತ್ನಿಸಿದ ಶಾಸಕ

ಮೀರತ್| ರಾಜೇಶ್ ಪಾಟೀಲ್| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
ಹಾಪುರ್‌ನ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ತೊಡಗಿದ್ದ ಪಂಚಭಾಷಾ ನಟಿ ನಗ್ಮಾ ಅವರೊಂದಿಗೆ ಕಾಂಗ್ರೆಸ್ ಶಾಸಕರೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ.

ಮೀರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ನಗ್ಮಾ ಅವರು ಭಾನುವಾರ ಹಾಪುರ್‌ ಎಂಬಲ್ಲಿ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ತೊಡಗಿದ್ದ ವೇಳೆ ಸ್ಥಳೀಯ ಕಾಂಗ್ರೆಸ್ ಶಾಸಕರಾದ ಗಜರಾಜ್ ಶರ್ಮಾ ಎನ್ನುವವರು ನಗ್ಮಾ ಅವರ ಹೆಗಲ ಮೇಲೆ ಕೈ ಇಟ್ಟು ತಬ್ಬಿಕೊಳ್ಳಲು ಮುಂದಾಗಿದ್ದಾರೆ, ಇದರಿಂದ ಮುಜುಗರಕ್ಕೀಡಾದ ನಗ್ಮಾ ಹೆಗಲ ಮೇಲಿದ್ದ ಕೈಯನ್ನು ತೆಗೆದು ಆಕ್ರೋಶಿತರಾಗಿ ಕಾರ್ಯಕ್ರಮವನ್ನು ಅರ್ಧದಲ್ಲಿ ಮೊಟಕುಗೊಳಿಸಿ ಬೇರೊಂದು ಕಾರ್ಯಕ್ರಮಕ್ಕೆ ತೆರಳಿರು ಎನ್ನಲಾಗಿದೆ.

ಶಾಸಕನ ಅನುಚಿತ ವರ್ತನೆ ವಿರುದ್ಧ ವಿವಿಧ ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿದ್ದು, ಕ್ಷಮೆ ಯಾಚಿಸುವಂತೆ ಆಗ್ರಹಿಸಿವೆ.


ಇದರಲ್ಲಿ ಇನ್ನಷ್ಟು ಓದಿ :