Widgets Magazine

ಕೇಜ್ರಿವಾಲ್ ನರೇಂದ್ರ ಮೋದಿಗೆ ಬರೆದ ಪತ್ರದ ಸಾರಾಂಶ ಕೆಳಗಿದೆ ಓದಿ

ವೆಬ್‌ದುನಿಯಾ|
PR
PR
ನವದೆಹಲಿ: ಮುಖೇಶ್ ಅಂಬಾನಿಗೆ ಕೆಲವು ಅನಿಲ ಬಾವಿಗಳನ್ನು ಕೇಂದ್ರ ಸರ್ಕಾರ ಗುತ್ತಿಗೆ ನೀಡಿದೆ. ಈ ಒಪ್ಪಂದದಂತೆ ರಿಲಯನ್ಸ್ ಪ್ರತಿ ಯೂನಿಟ್‌ಗೆ 2.3 ಡಾಲರ್‌ಗೆ ಅನಿಲ ಪೂರೈಕೆ ಮಾಡಬೇಕಿತ್ತು. ಮುಖೇಶ್ ಕೇಂದ್ರ ಸರ್ಕಾರದಮೇಲೆ ಪ್ರಭಾವ ಬೀರಿ 4 ಡಾಲರ್‌ಗಿಂತ ಹೆಚ್ಚು ಮಾಡಿಕೊಂಡರು. ಆದರೆ ಏಪ್ರಿಲ್ ಒಂದರಿಂದ ಸರ್ಕಾರ 8 ಡಾಲರ್ ನೀಡಲು ಮುಂದಾಗಿದೆ. ಇದರಿಂದ ಅಂಬಾನಿಗೆ 54,000 ಕೋಟಿ ಲಾಭವಾಗಲಿದೆ. ಒಂದು ವೇಳೆ ಅನಿಲ ಬೆಲೆ ಏರಿಕೆಯಾದರೆ ಇತರ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ. ದೆಹಲಿಯ ವರ್ಷದ ಬಜೆಟ್ ಕೂಡ ಇಷ್ಟು ಇರುವುದಿಲ್ಲ. ಅನಿಲ ಬೆಲೆ ಏರಿಕೆಯಾದ್ರೆ ಇನ್ನುಳಿದ ಸಾಮಗ್ರಿಗಳ ಬೆಲೆಯೂ ಏರಿಕೆಯಾಗಿ ಜನಸಾಮಾನ್ಯರಿಗೆ ಹೊರೆಯಾಗಲಿದೆ.

ಈ ವಿಷಯವಾಗಿ ನೀವು ಮತ್ತು ರಾಹುಲ್ ಗಾಂಧಿ ಯಾಕೆ ಮೌನ ವಹಿಸಿದ್ದೀರಿ ಎಂದು ಕೇಜ್ರಿವಾಲ್ ನರೇಂದ್ರ ಮೋದಿಗೆ ಬರೆದಿದ್ದಾರೆ. ನಿಮ್ಮ ಬಹಿರಂಗ ರ‌್ಯಾಲಿಗಳಿಗೆ ಹೇಗೆ ಹಣ ಬರುತ್ತಿದೆ? ನಿಮ್ಮ ಚುನಾವಣೆ ಪ್ರಚಾರಕ್ಕೆ ಹಣ ಹೇಗೆ ಬರ್ತಿದೆ. ಮುಕೇಶ್ ಅಂಬಾನಿ ಫಂಡ್ ಹರಿದುಬರ್ತಿದೆ ಎಂದು ಕೆಲವರು ಹೇಳ್ತಾರೆ.ಇದು ನಿಜವೇ? ಒಂದು ವೇಳೆ ನೀವು ವಿದೇಶದಿಂದ ಕಪ್ಪು ಹಣ ತರುವುದಾದರೆ ಅಂಬಾನಿಯ ಎರಡು ಅಕೌಂಟ್‌ಗಳಲ್ಲಿರುವ ಹಣವನ್ನೂ ತರ್ತೀರಾ ಎಂದು ಪ್ರಶ್ನಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :