Widgets Magazine

ಕ್ಷಮಾಪಣೆ ಕೇಳಿ, ಇಲ್ದಿದ್ರೆ ಕಾನೂನು ಕ್ರಮ ಕೈಗೊಳ್ತೇವೆ: ಕೇಜ್ರಿವಾಲ್‌ಗೆ ಗಡ್ಕರಿ ನೋಟಿಸ್

ನವದೆಹಲಿ| ವೆಬ್‌ದುನಿಯಾ| Last Modified ಶನಿವಾರ, 1 ಫೆಬ್ರವರಿ 2014 (13:33 IST)
ಬಿ
PR
PR
ಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕೇಜ್ರಿವಾಲ್ ಇತ್ತೀಚಿಗೆ ಬಿಡುಗಡೆಗೊಳಿಸಿದ ಭಾರತದ ಅತಿ ಭ್ರಷ್ಟರ ಪಟ್ಟಿಯಲ್ಲಿ ನಿತಿನ್ ಗಡ್ಕರಿಯವರ ಹೆಸರು ಕೂಡ ಇದ್ದು, ಅವರ ಹೇಳಿಕೆಯನ್ನು ಮೂರು ದಿನಗಳೊಳಗೆ ಹಿಂಪಡೆಯದಿದ್ದರೆ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಗಡ್ಕರಿ ತಮ್ಮ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ.ಈ ನೋಟಿಸ್ ತಲುಪಿದ ಮೂರು ದಿನಗಳೊಳಗಾಗಿ ಕೇಜ್ರಿವಾಲ್ ಸಾರ್ವಜನಿಕವಾಗಿ ಎಲ್ಲ ಸುದ್ದಿ ಮಾಧ್ಯಮಗಳ ಮುಂದೆ ಕ್ಷಮಾಪಣೆ ಕೇಳಬೇಕು ಮತ್ತು ಭಾರತದ ಅತಿ ಭ್ರಷ್ಟರ ಪಟ್ಟಿಯಿಂದ ಗಡ್ಕರಿಯವರ ಹೆಸರನ್ನು ತೆಗೆದು ಹಾಕಬೇಕು.


ಇದರಲ್ಲಿ ಇನ್ನಷ್ಟು ಓದಿ :