ಲಕ್ನೋ: ಕಳೆದ ಐದು ವರ್ಷಗಳ ಹಿಂದೆ ರಿಸಾರ್ಟ್ನಲ್ಲಿ ಯುವತಿಯ ಮೇಲೆ ಗ್ಯಾಂಗ್ರೇಪ್ ಎಸಗಿದ್ದ ಸಹಕಾರಿ ಬ್ಯಾಂಕ್ ಚೇರಮೆನ್ ಮತ್ತು ಬಿಜೆಪಿ ಮುಖಂಡ ಪ್ರಮೋದ್ ಗುಪ್ತಾಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಅಮಿತ್ ಕುಮಾರ್ ಸಿರೋಹಿ, ಗುಪ್ತಾ ಸಹಚರ ಅತ್ಯಾಚಾರದಲ್ಲಿ ಭಾಗಿಯಾದ ಆರೋಪಿ ಅಶೋಕ್ಕುಮಾರ್ಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.