Widgets Magazine

ಗ್ಯಾಂಗ್ ರೇಪ್ ಮಾಡಿ ಸ್ಕ್ರೂಡ್ರೈವರ್‌ನಿಂದ ಕಣ್ಣು ಕಿತ್ತ ಮೂವರಿಗೆ ಮರಣದಂಡನೆ

ವೆಬ್‌ದುನಿಯಾ| Last Modified ಬುಧವಾರ, 19 ಫೆಬ್ರವರಿ 2014 (17:39 IST)
PR
PR
ನವದೆಹಲಿ: ದೆಹಲಿಯಲ್ಲಿ 19 ವರ್ಷ ವಯಸ್ಸಿನ ಬಾಲಕಿ ಮೇಲೆ ಗ್ಯಾಂಗ್ ರೇಪ್ ಮಾಡಿ ಅವಳ ಮೈಮೇಲೆ ಆಸಿಡ್ ಎರಚಿ ನಂತರ ಸ್ಕ್ರೂಡ್ರೈವರ್‌ನಿಂದ ಬಾಲಕಿಯ ಕಣ್ಣುಗಳನ್ನು ಕಿತ್ತು ಪೈಶಾಚಿಕ ಕೃತ್ಯವೆಸಗಿದ ಮೂವರಿಗೆ ನಗರದ ಕೋರ್ಟ್‌ ಮರಣದಂಡನೆ ಶಿಕ್ಷೆ ವಿಧಿಸಿದೆ. ಪ್ರಾಪ್ತ ವಯಸ್ಕ ಬಾಲಕಿಯ ನಜ್ಜುಗುಜ್ಜಾದ ಕೊಳೆತ ಶವ ಹರ್ಯಾಣದ ಗ್ರಾಮದಲ್ಲಿ ಪತ್ತೆಯಾಗಿತ್ತು. ಗುರಗಾಂವ್ ಬಳಿಯ ಕಚೇರಿಯಿಂದ ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿ ನಂತರ ಗ್ಯಾಂಗ್ ರೇಪ್ ಮಾಡಲಾಗಿತ್ತು. ಅವಳ ಮೃತದೇಹದಲ್ಲಿ ಸಿಗರೇಟಿನಿಂದ ಸುಟ್ಟ ಗುರುತುಗಳು ಇದ್ದವು.


ಇದರಲ್ಲಿ ಇನ್ನಷ್ಟು ಓದಿ :