ಬಿಲಾಸ್ಪುರ್: ಕಾಮುಕರು ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಅಪಹರಿಸಿ ಚಲಿಸುವ ವ್ಯಾನ್ನಲ್ಲಿ ಎರಡು ವಾರಗಳ ಕಾಲ ನಿರಂತರ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ. ಆರೋಪಿಗಳಾದ ಮಹೇಂದ್ರ ಸೋನಿ(28) ಮತ್ತು ಈಶ್ವರ್ ಸೋನಿ(32) ಅವರನ್ನು ಬಂಧಿಸಲಾಗಿದ್ದು ಅತ್ಯಾಚಾರದ ಪ್ರಕರಣ ದಾಖಲಿಸಲಾಗಿದೆ ಎಂದು ಬಿಲಾಸ್ಪುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಮೀನಾ ತಿಳಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಸಹೋದರಿಯರು 15 ಮತ್ತು 13 ವರ್ಷ ವಯಸ್ಸಿನವರಾಗಿದ್ದು, ಪಾಲಕರ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.