ಡೀಸೆಲ್‌ ಟ್ಯಾಂಕರ್‌ಗೆ ಬಸ್ ಡಿಕ್ಕಿ: ಏಳು ಜನರ ದಾರುಣ ಸಾವು

ಮುಂಬೈ| ವೆಬ್‌ದುನಿಯಾ| Last Modified ಬುಧವಾರ, 29 ಜನವರಿ 2014 (11:06 IST)
PR
PR
ಐಷಾರಾಮಿ ಬಸ್ಸೊಂದು ಮಹಾರಾಷ್ಟ್ರದಲ್ಲಿ ಬೆಂಕಿಗೆ ಆಹುತಿಯಾಗಿದ್ದರಿಂದ ಏಳು ಜನರು ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ. ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಡೀಸೆಲ್ ಟ್ಯಾಂಕರ್‌ವೊಂದಕ್ಕೆ ಬಸ್ ಡಿಕ್ಕಿ ಹೊಡೆದ ಕೂಡಲೇ ಬೆಂಕಿ ಹೊತ್ತಿಕೊಂಡಿತು.ಅವಘಡದಲ್ಲಿ ಇನ್ನೂ 14 ಜನರಿಗೆ ಗಾಯಗಳಾಗಿದ್ದು, ಮುಂಬೈ-ಅಹ್ಮದಾಬಾದ್ ಹೆದ್ದಾರಿಯ ಮ್ಯಾನರ್‌ ಬಳಿ ರಾತ್ರಿ ಒಂದು ಗಂಟೆಗೆ ಅನೇಕ ಪ್ರಯಾಣಿಕರು ನಿದ್ರಾವಸ್ಥೆಯಲ್ಲಿದ್ದಾಗ ಈ ದುರಂತ ಸಂಭವಿಸಿದೆ. ಬಸ್ ಪುಣೆಯಿಂದ ಅಹ್ಮದಾಬಾದ್‌ ಕಡೆಗೆ ಪ್ರಯಾಣಿಸುತ್ತಿತ್ತು.ತುರ್ತು ಸೇವೆಗಳು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಸುಮಾರು 4 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು.


ಇದರಲ್ಲಿ ಇನ್ನಷ್ಟು ಓದಿ :