Widgets Magazine

ತೆಲಂಗಾಣ ಉದಯ: ಎರಡೂ ರಾಜ್ಯಗಳಿಗೆ ಹೈದ್ರಾಬಾದ್ ರಾಜಧಾನಿ

ರಾಜೇಶ್ ಪಾಟೀಲ್|
PR
PR
ನವದೆಹಲಿ: ತೆಲಂಗಾಣದ ಪ್ರತ್ಯೇಕ ರಾಜ್ಯಕ್ಕಾಗಿ ಪ್ರದೇಶದ ಜನರ ದಶಕಗಳ ಕಾಲದ ಹೋರಾಟ ಇಂದು ಫಲ ನೀಡಿದೆ. ಸಮನ್ವಯ ಸಮಿತಿ ಸಭೆಯಲ್ಲಿ ತೆಲಂಗಾಣ ರಾಜ್ಯ ನಿರ್ಮಾಣಕ್ಕೆ ಸರ್ವಾನುಮತದ ಅನುಮೋದನೆ ಸಿಕ್ಕಿದ ಬಳಿಕ, ಈಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೂಡ ತೆಲಂಗಾಣ ರಾಜ್ಯ ರಚನೆಗೆ ಗ್ರೀನ್ ಸಿಗ್ನಲ್ ನೀಡಿದೆ.
10 ವರ್ಷಗಳವರೆಗೆ ಹೈದರಾಬಾದ್ ರಾಜಧಾನಿಯಾಗಲಿದೆ. ನಾಳೆ ವಿಶೇಷ ಕೇಂದ್ರ ಸಂಪುಟ ಸಭೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಯಿತು. ತೆಲಂಗಾಣ ರಾಜ್ಯದ ಶತಾಯಗತಾಯ ಸ್ಥಾಪನೆಗೆ ಕಾಂಗ್ರೆಸ್ಸಿಗರು ಹೃತ್ಪೂರ್ವಕ ಬೆಂಬಲ ನೀಡಬೇಕು ಎಂದು ಮಕೇನ್ ತಿಳಿಸಿದರು.


ಇದರಲ್ಲಿ ಇನ್ನಷ್ಟು ಓದಿ :