ಹೈದರಾಬಾದ್: ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯವನ್ನು ರೂಪಿಸಲು ಕಾಂಗ್ರೆಸ್ ನಿರ್ಧರಿಸಿದ ಮಾರನೆಯ ದಿನವೇ, ಸಂಯುಕ್ತ ಆಂಧ್ರ ಜಂಟಿ ಕಾರ್ಯ ಸಮಿತಿ ಪ್ರತಿಭಟನಾರ್ಥವಾಗಿ ಬಂದ್ಗೆ ಕರೆ ನೀಡಿದೆ. ರಾಜ್ಯಸ್ವಾಮ್ಯದ ಬಸ್ಗಳ ಸಂಚಾರ ನಿಂತಿವೆ, ಶಾಲೆ ಮತ್ತು ಉದ್ಯಮ ಸಂಸ್ಥೆಗಳು ಬಂದ್ ಆಗಿವೆ.
ಬಸ್ ಸಂಚಾರ ಸ್ಥಗಿತ: ಆಂಧ್ರದಲ್ಲಿ ಬಂದ್ ಹಿನ್ನೆಲೆಯಲ್ಲಿ ಬಳ್ಳಾರಿಯಿಂದ ತೆರಳುವ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ತಿರುಪತಿಗೆ ತೆರಳುವ ಬಸ್ ಸಂಚಾರವನ್ನು ಕೂಡ ನಿಲ್ಲಿಸಲಾಗಿದೆ.