Widgets Magazine

ನರೇಂದ್ರ ಮೋದಿ ವಿರುದ್ಧ ಸ್ಪರ್ಧೆಗೆ ರಶೀದ್ ಅಲ್ವಿ ಮನವಿ

ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
PR
ವಾರಾಣಸಿ: ವಾರಾಣಸಿ ಜನತೆ ಜಾತ್ಯತೀತ ಅಭ್ಯರ್ಥಿಯನ್ನು ಬಯಸುತ್ತಿದ್ದು, ತಮಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ರಶೀದ್ ಅಲ್ವಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ತಮ್ಮನ್ನು ವಾರಾಣಸಿಯಿಂದ ಕಣಕ್ಕಿಳಿಸಿದರೆ ಮೋದಿ ಮತ್ತು ಕೇಜ್ರಿವಾಲ್ ವಿರುದ್ಧ ಜಯಗಳಿಸುವುದಾಗಿ ರಶೀದ್ ಹೇಳಿದ್ದಾರೆ. ನರೇಂದ್ರ ಮೋದಿ ಅವರು ಉತ್ತರಪ್ರದೇಶದಲ್ಲಿ ಬಿಜೆಪಿ ಅಲೆಯನ್ನು ವಿಸ್ತರಿಸುವುದಕ್ಕೆ ವಾರಾಣಸಿಯಲ್ಲಿ ಸ್ಪರ್ಧಿಸುತ್ತಿದ್ದು, ಗುಜರಾತಿನ ವಡೋದರಾದಲ್ಲಿ ಕೂಡ ಸ್ಪರ್ಧೆಗಿಳಿದಿದ್ದಾರೆ.

ನರೇಂದ್ರ ಮೋದಿಯನ್ನು ಸೋಲಿಸುವುದಕ್ಕೆ ವಾರಾಣಸಿಯಲ್ಲಿ ವಿವಿಧ ಪಕ್ಷಗಳ ಮುಖಂಡರು ಸಿದ್ದರಾಗಿದ್ದು, ಕೇಜ್ರಿವಾಲ್ ಈಗಾಗಲೇ ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದಿದ್ದಾರೆ. ವಿತ್ತ ಸಚಿವ ಚಿದಂಬರಂ ತಮಗೆ ಹಿಂದಿ ಗೊತ್ತಿರುತ್ತಿದ್ದರೆ ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸುತ್ತಿದ್ದೆ ಎಂದು ಹೇಳಿದ್ದಾರೆ. ಈಗ ಮೋದಿ ವಿರುದ್ದ ಸ್ಪರ್ಧೆಗೆ ಕಾಂಗ್ರೆಸ್‌ ಪಕ್ಷದ ರಶೀದ್ ಅಲ್ವಿ ಸೋನಿಯಾಗೆ ಪತ್ರ ಬರೆದು ಮನವಿ ಮಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :