ನರೇಂದ್ರ ಮೋದಿ 'ಶಕ್ತಿಹೀನ' ಎಂಬ ವಾಗ್ದಾಳಿ ವಿರುದ್ಧ ರಾಹುಲ್ ಎಚ್ಚರ

ವೆಬ್‌ದುನಿಯಾ|
PR
PR
ಫರೂಕಾಬಾದ್: ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ನರೇಂದ್ರ ಮೋದಿ ಅವರನ್ನು ಶಕ್ತಿಹೀನ(ಷಂಡ) ಎಂದು ವರ್ಣಿಸಿ ಹೊಸ ವಿವಾದ ಹುಟ್ಟುಹಾಕಿದ ಬಳಿಕ, ದ್ವೇಷದಿಂದ ಮಾತನಾಡುವುದರ ವಿರುದ್ಧ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ. ರಾಜಕಾರಣಿಗಳು ದ್ವೇಷದಿಂದ ಮಾತನಾಡಿದರೆ ಅದು ನಿಮಗೆ ಹಾನಿವುಂಟು ಮಾಡುತ್ತದೆ ಎಂದು ಅಸ್ಸಾಂ ಗುವಾಹಟಿಯ ಶಾಲೆಯಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ರಾಹುಲ್ ತಿಳಿಸಿದರು. ಕಾಂಗ್ರೆಸ್ ಉಪಾಧ್ಯಕ್ಷರ ಪದಗಳು ಖುರ್ಷಿದ್ ಅವರಿಗೆ ನೀಡಿದ ಪರೋಕ್ಷ ಸಂದೇಶವಾಗಿದೆ. ಖುರ್ಷಿದ್ ಫರೂಕಾಬಾದ್‌ನಲ್ಲಿ ನಡೆದ ರ‌್ಯಾಲಿಯಲ್ಲಿ 2002ರ ಗುಜರಾತ್ ಗಲಭೆಗಳ ಬಗ್ಗೆ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದರು.


ಇದರಲ್ಲಿ ಇನ್ನಷ್ಟು ಓದಿ :