Widgets Magazine

'ನಿಮ್ಮ ಧ್ವನಿ ನಮ್ಮ ಪ್ರತಿಜ್ಞೆ' ಸಂವಾದ ಕಾರ್ಯಕ್ರಮಕ್ಕೆ ತೆರೆ

ವೆಬ್‌ದುನಿಯಾ| Last Modified ಶನಿವಾರ, 11 ಜನವರಿ 2014 (18:26 IST)
PR
PR
ಬೆಂಗಳೂರು: ರಾಹುಲ್ ಗಾಂಧಿ ಅವರು ಬೆಂಗಳೂರಿನ ಟೆನ್ನಿಸ್ ಪೆವಿಲಿಯನ್‌ನಲ್ಲಿ ಆಯೋಜಿಸಿದ್ದ 'ನಿಮ್ಮ ಧ್ವನಿ ನಮ್ಮ ಪ್ರತಿಜ್ಞೆ' ಹೆಸರಿನಲ್ಲಿ ಸಂವಾದ ಕಾರ್ಯಕ್ರಮ ಇಂದು ಮುಕ್ತಾಯವಾಗಿದೆ. ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ಸಿದ್ದಪಡಿಸುವುದಕ್ಕೆ ಪೂರ್ವಭಾವಿಯಾಗಿ ಸಂವಾದ ಆಯೋಜಿಸಲಾಗಿತ್ತು. ಯುವಕರು ಕಾಂಗ್ರೆಸ್ ಬಗ್ಗೆ ಯಾವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎಂದು ರಾಹುಲ್ ತಿಳಿಯಲು ಬಯಸಿದರು. ಈ ಕಾರ್ಯಕ್ರಮದಲ್ಲಿ ರಾಹುಲ್ ಜತೆಗೆ ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ರಾಜ್ಯದ ವಿವಿಧ ನಾಯಕರು ಭಾಗವಹಿಸಿದ್ದರು.

ಸಂವಾದ ಕಾರ್ಯಕ್ರಮದ ಬಳಿಕ ಮಾತನಾಡಿದ ಸಚಿವ ಮನೀಶ್ ತಿವಾರಿ, ಜನರ ಭಾವನೆಗಳಿಗೆ ಪೂರಕವಾದ ಪ್ರಣಾಳಿಕೆ ಸಿದ್ದಪಡಿಸಲಾಗುವುದು. ಸಭೆಯಲ್ಲಿ ಯುವ ಸಾಧಕರ ಅಭಿಪ್ರಾಯ ಸಂಗ್ರಹಿಸಲಾಯಿತು ಎಂದು ಹೇಳಿದರು. ಪಕ್ಷದಲ್ಲಿ ಯುವಜನತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮನೀಶ್ ತಿವಾರಿ ಹೇಳಿದರು.


ಇದರಲ್ಲಿ ಇನ್ನಷ್ಟು ಓದಿ :