ಪತ್ರಕರ್ತೆ ಹೆಸರು ಟ್ವಿಟರ್‌ನಲ್ಲಿ : ಮೀನಾಕ್ಷಿ ಲೇಖಿಗೆ ನೋಟಿಸ್

ನವದೆಹಲಿ| ವೆಬ್‌ದುನಿಯಾ| Last Modified ಶನಿವಾರ, 30 ನವೆಂಬರ್ 2013 (19:27 IST)
PR
PR
ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಮಾಲ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಮಹಿಳೆ ಹೆಸರನ್ನು ಟ್ವಿಟರ್ ಅಕೌಂಟಿನಲ್ಲಿ ಬಳಸಿದ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಈ ಕುರಿತು 24 ಗಂಟೆಯೊಳಗೆ ಉತ್ತರಿಸುವಂತೆ ಮೀನಾಕ್ಷಿ ಲೇಖಿಗೆ ಸೂಚಿಸಲಾಗಿದೆ. ಲೈಂಗಿಕ ಶೋಷಣೆಗೆ ಅಥವಾ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಅಥವಾ ಮಹಿಳೆ ಹೆಸರನ್ನು ಎಲ್ಲೂ ಬಳಸಬಾರದು ಎಂಬ ನಿಯಮವಿದೆ. ಏಕೆಂದರೆ ಮಹಿಳೆಯ ಗೌರವ ಕಾಪಾಡುವುದು ಇದರ ಹಿಂದಿನ ಉದ್ದೇಶವಾಗಿದೆ.


ಇದರಲ್ಲಿ ಇನ್ನಷ್ಟು ಓದಿ :