ಫರಿದಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ ಮನೆಯ ಬಾತರೂಮ್ನಲ್ಲಿ ಸ್ಥಾನ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಮಹಿಳೆಯ ಪತಿ ಪ್ರಕಾರ, ಆರೋಪಿ ಸೋನು ಮನೆಯ ಕಂಪೌಂಡಿನ ಗೋಡೆಯನ್ನು ಹಾರಿ ರಹಸ್ಯವಾಗಿ ಪತ್ನಿ ಸ್ಥಾನ ಮಾಡುತ್ತಿದ್ದ ಬಾತ್ರೂಮ್ ಪ್ರವೇಶಿಸಿ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾನೆ. ಆದರೆ, ನನ್ನ ಪತ್ನಿ ಜೋರಾಗಿ ಕೂಗಿ ಕೊಂಡಿದ್ದರಿಂದ ಬಚಾವ್ ಆಗಿದ್ದಾಳೆ ಎಂದು ತಿಳಿಸಿದ್ದಾನೆ.