Widgets Magazine

ಬಿ ಜೆ ಪಿ ಮತ್ತು ಕಾಂಗ್ರೆಸ್ ಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ : ಅರವಿಂದ ಕೇಜ್ರಿವಾಲ್

ದೆಹಲಿ| ರಾಜೇಶ್ ಪಾಟೀಲ್|
PTI
ಶುಕ್ರವಾರ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಅರವಿಂದ ಕೇಜ್ರಿವಾಲ್ " ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ತನ್ನ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಲೋಕಪಾಲ್ ಮಸೂದೆ ವಿಫಲವಾಗಲು ಕಾರಣವಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ತೀಕ್ಷ್ಣವಾದ ವಾಗ್ದಾಳಿ ನಡೆಸಿದ್ದಾರೆ.

" ಆಮ್ ಆದ್ಮಿ ಪಕ್ಷದ (ಆಪ್) ಕಛೇರಿಯ ಹೊರಗೆ ಭಾರೀ ಸಂಖ್ಯೆಯ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ " ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಕೈ ಮಿಲಾಯಿಸಿವೆ. ನಾವು ಸಂವಿಧಾನದ ಪ್ರಕಾರ ನಡೆಯುತ್ತಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಅವರು ಭ್ರಷ್ಟಾಚಾರವನ್ನು ಮಾಡ ಬಯಸುತ್ತಾರೆ.ನಾವು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡ ಹೊರಟರೆ ಅವರದನ್ನು ಅಸಂವಿಧಾನಿಕ ಎನ್ನುತ್ತಾರೆ. ಅವರು ಧ್ವನಿವರ್ಧಕ ಗಳನ್ನು ಮುರಿಯುತ್ತಾರೆ ಮತ್ತು ಅದನ್ನು ಸಂವಿಧಾನಿಕ ಎಂದುಕೊಳ್ಳುತ್ತಾರೆ "ಎಂದು ಆರೋಪಿಸಿದರು.

ಲೋಕಪಾಲ್ ಮಸೂದೆ ಮಂಡನೆ ವಿಫಲವಾದ್ದರಿಂದ ಅರವಿಂದ ಕೇಜ್ರಿವಾಲ್ ಶುಕ್ರವಾರ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. " ನಿನ್ನೆ ವಿಧಾನಸಭೆಯಲ್ಲಿ ನಡೆದ ಘಟನೆಯಿಂದ ಎದಗುಂದಿದ್ದೇನೆ.ನಾನು ಅವರ ಇಚ್ಚೆಯಂತೆ ಕೆಲಸ ಮಾಡಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಬಯಸಿದ್ದವು. ನಾವು ಹೊಸಬರಾದ್ದರಿಂದ, ಏನೇ ಮಾಡಹೊರಟರೂ ಅವರ ಸಲಹೆ ಕೇಳುತ್ತೇವೆ ಎಂದು ಅವರು ಭಾವಿಸಿದ್ದರು. ಆದರೆ ನಾವು ಸಂವಿಧಾನವನ್ನು ಅನುಸರಿಸಿದೆವು. ಸಂವಿಧಾನಕ್ಕಾಗಿ ನಾನು ನನ್ನ ಪ್ರಾಣವನ್ನು ಕೊಡಲು ಕೂಡ ತಯಾರಿದ್ದೇನೆ " ಎಂದು ಕೇಜ್ರಿವಾಲ್ ಗುಡುಗಿದ್ದಾರೆ.

ತಮ್ಮ ಅರ್ಧ ಘಂಟೆಯ ಭಾಷಣದಲ್ಲಿ ಬಿ ಜೆ ಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡನ್ನು ಭ್ರಷ್ಟಾಚಾರಿಗಳು ಎಂದು ಜರಿದ ಕೇಜ್ರಿವಾಲ್ ವಿಧಾನ ಸಭೆಯಲ್ಲಿ " ನಾವು 28 ಸ್ಥಾನಗಳನ್ನು ಗೆದ್ದಿದ್ದೆವು. ನಾವು ಬಿ ಜೆ ಪಿ ಅಥವಾ ಕಾಂಗ್ರೆಸ್ಸಿಗರ ಬೆಂಬಲವನ್ನು ಬಯಸಿರಲಿಲ್ಲ. ಕಾಂಗ್ರೆಸ್ ಒತ್ತಾಯಪೂರ್ವಕವಾಗಿ ನಮಗೆ ಬೆಂಬಲವನ್ನು ನೀಡಿತು. ಜನರ ಅಭಿಪ್ರಾಯದಂತೆ ನಾವು ಡಿಸೆಂಬರ್ 28 ರಂದು ನಾವು ಅಧಿಕ್ಕಾರಕ್ಕೇರಿದೆವು.ಜನ ಲೋಕಪಾಲ್ ಬಿಲ್‌ನ್ನು ಜಾರಿಗೆ ತರುವುದು ನಮ್ಮ ಪ್ರಮುಖ ವಾಗ್ದಾನವಾಗಿತ್ತು. ಕಾಂಗ್ರೆಸ್ ಜನಲೋಕಪಾಲ ಮಸೂದೆಗೆ ಬೆಂಬಲಿಸುತ್ತೇವೆ ಎಂದು ಬರವಣಿಗೆಯಲ್ಲಿ ನೀಡಿತ್ತು. ಆದರೆ, ಇದೀಗ ಕಾಂಗ್ರೆಸ್ ಪಕ್ಷ ಮಸೂದೆಯನ್ನು ವಿರೋಧಿಸಿ ವಿಶ್ವಾಸದ್ರೋಹ ಎಸಗಿದೆ" ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :