ಮದುವೆಯಾಗುವಂತೆ ಒತ್ತಾಯಿಸಿದ ಚಾಲಕ ಮಹಿಳೆಗೆ ಮಾಡಿದ್ದೇನು ಗೊತ್ತಾ?

ಪುಣೆ| pavithra| Last Modified ಮಂಗಳವಾರ, 23 ಫೆಬ್ರವರಿ 2021 (08:54 IST)
ಪುಣೆ : ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿ ಚಾಲಕನೊಬ್ಬ 34 ವರ್ಷದ ಮಹಿಳೆಯನ್ನು ಅಪಹರಿಸಿ ಬಂಧನದಲ್ಲಿಟ್ಟ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಮಹಿಳೆಯನ್ನು ಪ್ರೀತಿಸುತ್ತಿದ್ದ ಚಾಲಕ ಆಕೆಯ ಬಳಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಪ್ರತಿಕ್ರಿಯಿಸದ ಆಕೆಯನ್ನು ಅಪಹರಿಸಿ 14 ದಿನಗಳ ಕಾಲ ಬಂಧನದಲ್ಲಿಟ್ಟಿದ್ದ.  ಮಹಿಳೆಯ ಮನೆಯವರು ಆಕೆ ನಾಪತ್ತೆಯಾದ ದೂರು ದಾಖಲಿಸಿದರೂ ಪೊಲೀಸರಿಗೆ ಆಕೆಯನ್ನು ಹುಡಕಲು ಸಾಧ್ಯವಾಗಲಿಲ್ಲ. ಇತ್ತ ಮಹಿಳೆ ಆರೋಪಿಯಿಂದ ಹೇಗೋ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ.  ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :