Widgets Magazine

ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿ, ಲಾರಿಯಿಂದ ನಗ್ನಸ್ಥಿತಿಯಲ್ಲಿ ಹೊರಗೆ ಎಸೆದ ಕಾಮುಕರು

ವಾರಂಗಲ್| ರಾಜೇಶ್ ಪಾಟೀಲ್|
ದೆಹಲಿಯ ನಿರ್ಭಯ್ ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೇಯ ಘಟನೆ ವರದಿಯಾಗಿದೆ.ಲಾರಿಯೊಂದರ ಚಾಲಕ ಮತ್ತು ಕ್ಲೀನರ್ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿ ನಗ್ನ ಸ್ಥಿತಿಯಲ್ಲಿಯೇ ಚಲಿಸುತ್ತಿರುವ ಲಾರಿಯಿಂದ ಕೆಳಕ್ಕೆ ಎಸೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗ್ನ ಸ್ಥಿತಿಯಲ್ಲಿ ದೇಹದ ತುಂಬಾ ಗಾಯಗಳೊಂದಿಗೆ ಬೆತ್ತಲೆಯಾಗಿ ಬಿದ್ದಿದ್ದ ಮಹಿಳೆಯನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹೈದ್ರಬಾದ್‌ನಲ್ಲಿ ಮನೆಗೆಲಸ ಮಾಡಿಕೊಂಡಿದ್ದ 30 ವರ್ಷ ವಯಸ್ಸಿನ ಮಹಿಳೆ ಮೇದಕ್ ಜಿಲ್ಲೆಯ ರಾಮಾಯಾಪೇಟ್‌ನಿಂದ ಹೈದ್ರಾಬಾದ್‌ಗೆ ತೆರಳುತ್ತಿರುವ ಲಾರಿಯನ್ನು ಹತ್ತಿದ್ದಾಳೆ. ಲಾರಿ ಚಾಲಕ ಮತ್ತು ಕ್ಲೀನರ್ ಆಕೆಯ ಮೇಲೆ ಅತ್ಯಾಚಾರವೆಸಗಿ ವಾರಂಗಲ್ ಜಿಲ್ಲೆಯ ಬಚನ್ನಾಪೇಟ್‌ ಮಂಡಲ್ ವ್ಯಾಪ್ತಿಯ ತಮ್ಮಾಡ್‌ಪಲ್ಲಿ ಗ್ರಾಮದ ಬಳಿ ಚಲಿಸುತ್ತಿರುವ ಲಾರಿಯಿಂದ ಕೆಳಕ್ಕೆ ಎಸೆದು ಪರಾರಿಯಾಗಿದ್ದಾರೆ

ಬಚಾನ್ನಾಪೇಟ್ ಪೊಲೀಸ್ ಠಾಣೆಯ ಅಧಿಕಾರಿ ಮೊಹಮ್ಮದ್ ಸಾದುಲ್ಲಾ ಬಾಬಾ ಮಾತನಾಡಿ, ಅತ್ಯಾಚಾರಕ್ಕೊಳಗಾದ ಮಹಿಳೆಯ ಮೇಲೆ ಗಂಭೀರವಾದ ಗಾಯಗಳಿವೆ. ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಕೆಲ ಗ್ರಾಮಸ್ಥರು ಲಾರಿಯನ್ನು ಹಿಂಬಾಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.

ಪೊಲೀಸರು ಆರೋಪಿ ಲಾರಿ ಚಾಲಕ ಮತ್ತು ಕ್ಲೀನರ್‌ನನ್ನು ದೇವರುಪ್ಪುಲಾ ಗ್ರಾಮದ ಬಳಿ ಬಂಧಿಸಲಾಗಿದೆ. ಆರೋಪಿ ಚಾಲಕ ಕೃಷ್ಣ ಜಿಲ್ಲೆಯವನಾಗಿದ್ದಾನೆ. ಅತ್ಯಾಚಾರಕ್ಕೊಳಗಾದ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅತ್ಯಾಚಾರಕ್ಕೊಳಗಾದ ಮಹಿಳೆಗೆ ಲಾರಿ ಚಾಲಕ ಮತ್ತು ಕ್ಲೀನರ್ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ನಂತರ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :